ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲವ್ ಜಿಹಾದ್ ಎಂದು ಶಂಕಿಸಲಾಗಿದ್ದ 20ರ ಹರೆಯದ ಯುವತಿ ಅನ್ಯ ಕೋಮಿನ ಯುವಕನ ಜತೆ ಪರಾರಿಯಾಗಿರುವ ಘಟನೆ ಬೆನ್ನಿಗೆ ಕಾಸರಗೋಡು ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲೂ ಯುವತಿಯೊಬ್ಬಳು ಯುವಕನ ಜತೆ ಪರಾರಿಯಾಗಿದ್ದಾಳೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ 'ಕಾಪಾ'ಪ್ರಕರಣವೊಂದರ ಆರೋಪಿ ಅನ್ಯ ಕೋಮಿನ ಯುವಕನ ಜತೆ 20ರ ಹರೆಯದ ಯುವತಿ ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಟ್ರಸ್ ಒಂದರಲ್ಲಿ ಯುವತಿಯ ಕುಟುಂಬ ಇತ್ತೀಚೆಗೆ ವಾಸ್ತವ್ಯ ಆರಂಭಿಸಿದ್ದು, ಈ ಮಧ್ಯೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅನ್ಯ ಕೋಮಿನ ಯುವಕನ ಜತೆ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಈ ಬಗ್ಗೆ ಮನೆಯವರು ಯುವತಿಗೆ ಎಚ್ಚರಿಕೆ ನೀಡುತ್ತಿದ್ದಂತೆ, ಆಕೆ ಯುವಕನ ಜತೆ ಪರಾರಿಯಾಗಿದ್ದಾಳೆ.
ಇತ್ತೀಚೆಗಷ್ಟೆ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೇಹಾ ಎಂಬಾಕೆ ಮಿರ್ಶಾದ್ ಎಂಬಾತನೊಂದಿ ಪರಾರಿಯಾಗಿದ್ದಳು. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಆಗಿದ್ದು, ಪೊಲೀಸರ ಪರೋಕ್ಷ ಬೆಂಬಲದೊಂದಿಗೆ ನೇಹಾಳನ್ನು ಮಿರ್ಶಾದ್ ಅಪಹರಿಸಿರುವುದಾಗಿ ಆರೋಪಿಸಿ ವಿಹಿಂಪ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆ ಎದುರು ಧರಣಿಯನ್ನೂ ನಡೆಸಿತ್ತು.