ತಿರುವನಂತಪುರಂ: ವಿಧಾನಸಭೆ ಕಲಾಪದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಈ ರೀತಿ ಬೊಗಳುತ್ತಿರುವುದರ ಅರ್ಥವೇನು(ಕುರಕ್ಕುನ್ನದ್ ಎಂದಿನಾ?) ಎಂದು ಸಚಿವ ವಿ.ಶಿವನ್ ಕುಟ್ಟಿ ಅವರಿಗೆ ಸೂಚಿಸಿದ ಲೀಗ್ ಶಾಸಕ ಎನ್. ಶಂಸುದ್ದೀನ್ ಅವರ ಪ್ರಶ್ನೆ ವಾಗ್ವಾದಕ್ಕೆ ಕಾರಣವಾಯಿತು.
ಶಂಸುದ್ದೀನ್ ಅವರು ಮಲಬಾರ್‍ನಲ್ಲಿ ಪ್ಲಸ್ ಒನ್ ಸೀಟುಗಳ ಕೊರತೆ ನೀಗಿಸಲು ಒತ್ತಾಯಿಸಿ ತುರ್ತು ಪ್ರಸ್ತಾವನೆ ನೋಟಿಸ್ ಮಂಡಿಸಿದ್ದರು. ಇದನ್ನು ಅನುಸರಿಸಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟು ಇಲ್ಲ ಮತ್ತು ಸದನವನ್ನು ಮುಂದೂಡುವ ಮೂಲಕ ತುರ್ತು ನಿರ್ಣಯದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ವಿ ಶಿವನ್‍ಕುಟ್ಟಿ ಹೇಳಿದರು. ಇದರ ಬೆನ್ನಲ್ಲೇ ಕುಪಿತರಾದ ಶಾಸಕರು ಈ ರೀತಿ ಬೊಗಳುವುದಕ್ಕೆ ಅರ್ಥವೇನೆಂದು ಪ್ರಶ್ನಿಸಿದರು.
ಸಚಿವರು ಹೇಳಿದ್ದು ಸುಳ್ಳಲ್ಲ. ನೂರಾರು ಮಕ್ಕಳು ಸೀಟು ಲಭಿಸದೆ ಹೊರಗಿದ್ದಾರೆ. ಪೂರ್ಣ ಎ ಪ್ಲಸ್ ಪಡೆದವರಿಗೂ ಮೊದಲ ಹಂಚಿಕೆಯಲ್ಲಿ ಸೀಟು ಸಿಕ್ಕಿರಲಿಲ್ಲ. ಹೀಗೆ ಹೇಳುವಾಗ ಹೀಗೆ ಬೊಗಳುತ್ತಿರುವುದರ ಅರ್ಥವೇನು?' ಎಂದು ಶಂಸುದ್ದೀನ್ ಪ್ರಶ್ನಿಸಿದರು. ಕೊನೆಗೆ ಸಭಾಧ್ಯಕ್ಷರು ‘ಕುರಾ’ ಪದವನ್ನು ಅಸಂಸದೀಯ ಎಂದು ಹೇಳಿ ದಾಖಲೆಗಳಿಂದ ತೆಗೆದು ಹಾಕಿದರು.