ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ದೃಢಕಲಶದ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ಹಾಡಿ ರಂಜಿಸಿದ ಅನ್ವಿತಾ ತಲ್ಪಣಾಜೆ ಇವರನ್ನು ಶ್ರೀಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಈಕೆ ರಾಜ್ಯಮಟ್ಟದ ಕಲೋತ್ಸವದಲ್ಲಿ 4 ವಿಭಾಗದಲ್ಲಿ ಎ ಗ್ರೇಡ್ ಪಡೆದಿರುವುದಲ್ಲದೆ, ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯದಲ್ಲೂ ಎ ಪ್ಲಸ್ ಪಡೆದಿರುತ್ತಾಳೆ. ನಿವೃತ್ತ ಅಧ್ಯಾಪಕ, ಹವ್ಯಾಸಿ ಭಾಗವತ ಶಿವಶಂಕರ ತಲ್ಪಣಾಜೆ ಹಾಗೂ ಅಧ್ಯಾಪಿಕೆ ಸುಧಾ ತಲ್ಪಣಾಜೆ ಇವರ ಪುತ್ರಿ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಹಳೆವಿದ್ಯಾರ್ಥಿನಿಯಾಗಿದ್ದಾಳೆ.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಗುರಿಕ್ಕಾರ ಕುಳಮರ್ವ ಮಹಾಲಿಂಗ ಭಟ್ ಏಳ್ಕಾನ ಉಪಸ್ಥಿತರಿದ್ದರು. ಕೆ.ಎಂ.ವೆಂಕಟೇಶ್ವರ ಭಟ್ ಕುಂಟಿಕಾನ ಮಠ ನೇತೃತ್ವ ವಹಿಸಿದ್ದರು. ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಬಿ.ಕುಳಮರ್ವ ನಿರೂಪಿಸಿದರು.