ನವದೆಹಲಿ: 'ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಕಿತ್ತೆಸೆಯಬೇಕಿದೆ' ಎಂಬ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, 'ಸುರಕ್ಷಿತ ಹಾರ್ಡ್‌ವೇರ್ ತಯಾರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ' ಎಂದು ಹೇಳಿದ್ದಾರೆ.

'ಇಂದಿನ ಡಿಜಿಟಲ್ ಯುಗದಲ್ಲಿ ಯಾರೂ ಸುರಕ್ಷಿತ ಹಾರ್ಡ್‌ವೇರ್ ತಯಾರಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯವಾದ ಹೇಳಿಕೆಯನ್ನು ಎಲಾನ್ ಮಸ್ಕ್ ನೀಡಿದ್ದಾರೆ. ಆದರೆ, ಅದು ತಪ್ಪು. ಅಮೆರಿಕ, ಯುರೋಪ್‌ನಲ್ಲಿ ಆ ರೀತಿ ಆಗಬಹುದೇನೊ.. ಆದರೆ ನಮ್ಮಲ್ಲಿ ಅದು ಸಾಧ್ಯವಿಲ್ಲ. ಏಕೆಂದರೆ ಅಂತರ್ಜಾಲವನ್ನು ಸೃಷ್ಟಿಸಲು ಅವರು ಸಾಮಾನ್ಯವಾದ ಕಂಪ್ಯೂಟರ್ ಫ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.
'ಭಾರತದಲ್ಲಿ ಇವಿಎಂಗಳನ್ನು ಕಸ್ಟಮೈಸ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಸುರಕ್ಷಿತವಾಗಿವೆ. ಬ್ಲೂಟೂತ್, ವೈಫೈ, ಇಂಟರ್‌ನೆಟ್ ಯಾವುದರಿಂದಲೂ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದಂತೆ ವಿನ್ಯಾಸಗೊಳಿಸಲಾಗಿದೆ. ಫ್ಯಾಕ್ಟರಿ ಪ್ರೋಗ್ರಾಮ್ ಕನ್‌ಟ್ರೋಲರ್ಸ್ ವ್ಯವಸ್ಥೆಯಿದ್ದು, ರೀಪ್ರೋಗ್ರಾಮ್ ಮಾಡಲು ಕೂಡ ಸಾಧ್ಯವಿಲ್ಲ' ಎಂದು ಹೇಳಿದರು.
'ಇವಿಎಂ ಬಗ್ಗೆ ಟ್ಯುಟೋರಿಯಲ್ ನಡೆಸಲು ನಾವು ಸಂತೋಷಪಡುತ್ತೇವೆ ಎಲಾನ್..' ಎಂದು ಕುಟುಕಿದ್ದಾರೆ.
ಪೋರ್ಟೋ ರಿಕೋದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ಈ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಲಾನ್ ಮಸ್ಕ್, 'ವಿದ್ಯುನ್ಮಾನ ಮತಯಂತ್ರಗಳನ್ನು ನಾವು ಕಿತ್ತೆಸೆಯಬೇಕಿದೆ. ಮನುಷ್ಯರಿಂದ ಇಲ್ಲವೇ ಎಐನಿಂದ ಇವಿಎಂ ಹ್ಯಾಕ್ ಆಗುವ ಸಣ್ಣ ಸಾಧ್ಯತೆಯಿದ್ದರೂ, ಚುನಾವಣಾ ಫಲಿತಾಂಶದ ಮೇಲೆ ಅದರ ಪರಿಣಾಮ ಅಧಿಕವಾಗಿರುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದರು.