HEALTH TIPS

ದಕ್ಷಿಣ ಆಫ್ರಿಕಾದ ಶಾಸಕಾಂಗ ಚುನಾವಣೆ: ತಿರುವಲ್ಲ ಮೂಲದ ಅನಿಲ್ ಕುಮಾರ್ ಗೆ ಜಯ

               ತಿರುವಲ್ಲ: ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಾಂತೀಯ ಶಾಸಕಾಂಗ (ಎಂಪಿಎಲ್) ಸದಸ್ಯರಾಗಿ ತಿರುವಲ್ಲ ಮನ್ನಂಕರಚಿರ ಕೇಶವತ್‍ನ ಅನಿಲ್‍ಕುಮಾರ್ ಕೇಶವಪಿಳ್ಳೈ ಮರು ಆಯ್ಕೆಯಾದರು.

            ಅನಿಲ್ ಕುಮಾರ್ ಅವರು ಶಾಸಕರಿಗೆ ಸಮಾನವಾದ ಈ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯರೂ ಹೌದು.

              ಐದು ವರ್ಷಗಳ ಅವಧಿಗೆ ಈಸ್ಟರ್ನ್ ಕೇಪ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಎರಡನೇ ನೇಮಕಾತಿಯಾಗಿದೆ. ಅನಿಲ್ ಅವರು 72 ಸದಸ್ಯರ ಪ್ರಾಂತೀಯ ಶಾಸಕಾಂಗದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪ್ರತಿನಿಧಿಯಾಗಿದ್ದಾರೆ.

            ಕೊನೆಯ ಅವದಿಯಲ್ಲಿü ಶಿಕ್ಷಣ, ಆರೋಗ್ಯ ಮತ್ತು ಪ್ರಧಾನ ಮಂತ್ರಿಗಳ (ಮುಖ್ಯಮಂತ್ರಿ ಕಚೇರಿ) ವಿಪ್ ಆಗಿದ್ದರು.  ಶಿಕ್ಷಕರಾಗಿದ್ದ ಅನಿಲ್ ಕುಮಾರ್ ಪೂರ್ವ ಕೇಪ್ ರಾಜ್ಯದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದರು. ಅವರು 1990 ರಿಂದ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಇವರು ತಿರುವಲ್ಲ ಮತ್ತಿಲಭಾಗ ಮಾಳಿಯ ದಿವಂಗತ ಕೇಶವಪಿಳ್ಳ ಮತ್ತು ಈಶ್ವರಿಯಮ್ಮ ದಂಪತಿಯ ಪುತ್ರ. ದಕ್ಷಿಣ ಆಫ್ರಿಕಾದಲ್ಲಿ ಶಿಕ್ಷಕಿಯಾಗಿರುವ ಮಿನಿ ಪಿಳೈಲ್ಲಿವರ ಪತ್ನಿ. ಡಾ. ವಿಷ್ಣು ಪಿಳ್ಳೆ, ಡಾ. ಮೀರಪಿಳ್ಳ ಅವರ ಮಕ್ಕಳು. ಚಿಬಿನ್ ಮತ್ತು ಡಾ. ವೃಂದಾ ಸೊಸೆಯಂದಿರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries