ತಿರುವನಂತಪುರಂ :ಮಲಯಾಳಂ ನಟಿ, ನಿರೂಪಕಿ ರಚನಾ ನಾರಾಯಣನ್ ಕುಟ್ಟಿ ತಿರುಪತಿಗೆ ಭೇಟಿ ನೀಡಿ ತಮ್ಮ ತಲೆಯ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಿರುವನಂತಪುರಂ :ಮಲಯಾಳಂ ನಟಿ, ನಿರೂಪಕಿ ರಚನಾ ನಾರಾಯಣನ್ ಕುಟ್ಟಿ ತಿರುಪತಿಗೆ ಭೇಟಿ ನೀಡಿ ತಮ್ಮ ತಲೆಯ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಿರುಪತಿ ದರ್ಶನಕ್ಕೆ ಹೋಗಿರುವ ನಟಿ ರಚನಾ ನಾರಾಯಣನ್ ಕುಟ್ಟಿ, ತಮ್ಮ ಕೇಶಮುಂಡನ ಸೇವೆಯನ್ನು ಮಾಡಿಸಿದ್ದಾರೆ.
ರಚನಾ, ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹೆಚ್ಚಿನವರು ಇದು ಎಡಿಟೆಡ್ ಫೋಟೋ ಆಗಿರಬಹುದು ಎಂದುಕೊಂಡಡಿದ್ದರು. ಆದರೆ, ಫೋಟೋಗೆ ನೀಡಲಾದ ಅಡಿಬರಹ ಓದಿದ ಬಳಿಕ ನಟಿ ನಿಜವಾಗಿಯೂ ತಲೆ ಬೋಳಿಸಿಕೊಂಡಿದ್ದಾರೆ ಎನ್ನುವುದು ಖಚಿತವಾಗಿದೆ.
ಟಿವಿ ಧಾರವಾಹಿಗಳ ಬಳಿಕ ನಟಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿರುವ ರಚನಾ ನಾರಾಯಣನ್ ಕುಟ್ಟಿ, ಸಾಮಾಜಿಕ ವಿಚಾರಗಳ ಬಗ್ಗೆ ಬಹಳ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.