ಉಪ್ಪಳ: ಮಂಜೇಶ್ವರ ತಾಲೂಕು ಗ್ರಂಥಾಲಯ (ಲೈಬ್ರರಿ) ಕೌನ್ಸಿಲಿನ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲಿನ ಯೋಜನೆಯ ಅಂಗವಾಗಿ ಗ್ರಂಥಪಾಲಕರು (ಲೈಬ್ರರಿಯನ್) ಮತ್ತು ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಕ್ರಮ ಸೋಮವಾರ ಪೈವಳಿಕೆ ಪಂಚಾಯತಿ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷ ಕೆ.ವಿ. ಕುಂಞÂ್ಞ ರಾಮನ್ ಉದ್ಘಾಟಿಸಿದರು. ತಾಲೂಕು ಗ್ರಂಥಾಲಯ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗ್ರಂಥಾಲಯ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೈನ್ ಪಿ.ಕೆ. ಶುಭಾಶಂಸನೆಗೈದರು. ತಾಲೂಕು ಕೌನ್ಸಿಲ್ ಜೊತೆ ಕಾರ್ಯದರ್ಶಿ ಶ್ರಿಕುಮಾರಿ ಕೆ. ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕಿಶೋರ್ ಕುಮಾರ್ ಹಾಗೂ ಸಲಾವುದ್ದೀನ್ ಸಹಕರಿಸಿದರು. ಎಲ್ಲಾ ಗ್ರಂಥಾಲಯಗಳ ಗ್ರಂಥಪಾಲಕರು, ಕಾರ್ಯದರ್ಶಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಂಜೇಶ್ವರ ತಾಲೂಕು ಗ್ರಂಥಾಲಯ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ ಸ್ವಾಗತಿಸಿ, ವಂದಿಸಿದರು.