ಕಾಸರಗೋಡು: ಲೋಕಸಭಾ ಚುನಾವಣಾ ಮತ ಎಣಿಕೆ ಕೇಂದ್ರಗಳಾದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಕಾವೇರಿ, ಗಂಗೋತ್ರಿ ಮತ್ತು ಸಾಬರಮತಿ ಬ್ಲಾಕ್‍ಗಳಿಗೆ ಚುನಾವಣಾ ವೀಕ್ಷಕ ರಿಶಿರೇಂದ್ರ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್, ಮತ ಎಣಿಕೆ ವೀಕ್ಷಕರಾದ ಆದಿತ್ಯ ಕುಮಾರ್ ಪ್ರಜಾಪತಿ ಮತ್ತು ಹಿಮಾಂಶು ವರ್ಮಾ ಜತೆಗಿದ್ದರು. ಸಬ್ ಅಪರ ಜಿಲ್ಲಾಧಿಕಾರಿ ಹಾಗೂ ಉಪ ಚುನಾಣಾಧಿಕಾರಿ ಸುಫಿಯಾನ್ ಅಹಮದ್ ಹಾಗೂ ಎ.ಆರ್.ಒಮರ್ ಮತ ಎಣಿಕಾ ಕೇಂದ್ರಗಳಲ್ಲಿ ನಡೆಸಲಾಗಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಮಂಜೇಶ್ವರ, ಕಾಸರಗೋಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಋಷಿರೇಂದ್ರ ಕುಮಾರ್ ಐಎಎಸ್, ಉದುಮ ಕಾಂಞಂಗಾಡ್ ಕ್ಷೇತ್ರಗಳ ಉಸ್ತುವಾರಿ ಆದಿತ್ಯ ಕುಮಾರ್ ಪ್ರಜಾಪತಿ ಮತ್ತು ತ್ರಿಕರಿಪುರ, ಪಯ್ಯನ್ನೂರು, ಕಲ್ಯಾಶ್ಸೆರಿ ಕ್ಷೇತ್ರಗಳ ಉಸ್ತುವಾರಿಯನ್ನು ಹಿಮಾಂಶು ವರ್ಮಾ ವಹಿಸಿಕೊಂಡಿದ್ದಾರೆ.