HEALTH TIPS

ಒಂದು ಯೂನಿಟ್ ರಕ್ತದಾನ ನಾಲ್ವರಿಗೆ ಜೀವದಾನ

 ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದಾಗಿದೆ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನಕ್ಕೆ ಜನರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷದಂತೆ ಈ ವರ್ಷವೂ ಜೂ. 14ರಂದು ಆಚರಿಸಲಾಗುತ್ತಿದೆ. 

ದೇಶದಲ್ಲಿ ಪ್ರತಿ ವರ್ಷ ಸುಮಾರು 5 ಕೋಟಿ ಯೂನಿಟ್​ಗೂ ಅಧಿಕ ರಕ್ತದ ಅವಶ್ಯಕತೆ ಇದೆ. ಆದರೆ ಲಭ್ಯವಿರುವುದು ಕೇವಲ 2.5ರಿಂದ 3 ಕೋಟಿ ಯೂನಿಟ್ ಮಾತ್ರ. ಅಂದರೆ ಶೇ. 40ರಷ್ಟು ರಕ್ತದ ಕೊರತೆ ಇದೆ. ಇದರಿಂದಾಗಿ ಥಲಸ್ಸೇಮಿಯಾ, ಹಿಮೊಫೀಲಿಯಾದಂತಹ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ರೋಗಿಗಳಿಗೆ, ಲಕ್ಷಾಂತರ ಕ್ಯಾನ್ಸರ್ ಪೀಡಿತರು ಸೇರಿ ನಾನಾ ಶಸ್ತ್ರಚಿಕಿತ್ಸೆಗಳಿಗೆ ರಕ್ತ ಸಿಗುತ್ತಿಲ್ಲ. ಹಾಗಾಗಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಅಗತ್ಯವಿದೆ.

ಇಂಟರ್​ನ್ಯಾಷನಲ್ ಫೆಡರೇಷನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಇಂಟರ್​ನ್ಯಾಷನಲ್ ಫೆರಡೇಷನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ ಮತ್ತು ಇಂಟರ್​ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್​ಪ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೂ. 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಘೋಷಿಸಿದೆ.

ಯಾರು ರಕ್ತದಾನ ಮಾಡಬಹುದು?:18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, ದೇಹದ ತೂಕ ಕನಿಷ್ಠ 45 ಕೆ.ಜಿ. ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್​ಬಿ) ಪ್ರಮಾಣ ಕನಿಷ್ಠ 12.5 ಇರಬೇಕು.

ಯಾರು ರಕ್ತದಾನ ಮಾಡುವಂತಿಲ್ಲ?: ಅನಾರೋಗ್ಯ ಇರುವವರು, ನಿಯಮಿತವಾಗಿ ಔಷಧ ಸೇವಿಸುವವರು, ಸಾಂಕ್ರಾಮಿಕ ರೋಗ ಹೊಂದಿರುವವರು, ಎಚ್​ಐವಿ/ಏಡ್ಸ್ ಸೋಂಕಿತರು, ಕ್ಯಾನ್ಸರ್ ರೋಗಿಗಳು, ಹೃದ್ರೋಗಿಗಳು, ಕ್ಷಯ ರೋಗಿಗಳು, ಹೆಪಟೈಟಿಸ್ ಬಿ, ರಕ್ತಹೀನತೆ, ಅಪೌಷ್ಟಿಕತೆ ಇರುವವರು, ಗರ್ಭಿಣಿಯರು, ಮಧುಮೇಹ ನಿಯಂತ್ರಣದಲ್ಲಿ ಇಲ್ಲದವರು, ಮಾದಕ ವ್ಯಸನಿಗಳು, ಕಿಡ್ನಿ ಸೇರಿದಂತೆ ಅಂಗಾಂಗಗಳ ತೊಂದರೆ ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿರುವವರು, ರಕ್ತದಾನ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದವರು, ಬದಲಿ ರಕ್ತ ಹಾಕಿಸಿಕೊಂಡವರು, ರೇಬಿಸ್ ಲಸಿಕೆ, ಮೈ ಮೇಲೆ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡವರು 6 ತಿಂಗಳ ಕಾಲ ರಕ್ತದಾನ ಮಾಡಬಾರದು.

ರಕ್ತದಾನದ ಉಪಯೋಗವೇನು?: ರಕ್ತದಾನ ಮಾಡಿದ ವ್ಯಕ್ತಿಯ ದೇಹದಲ್ಲಿ 48 ಗಂಟೆಗಳೊಳಗೆ ಅಷ್ಟೇ ಪ್ರಮಾಣದ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹೊಂದಬಹುದು. ಜ್ಞಾಪಕಶಕ್ತಿಯೂ ಹೆಚ್ಚುತ್ತದೆ, ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಹಾಗೂ ಮಧುಮೇಹ ತಡೆಯಲು ಸಹಕಾರಿಯಾಗುತ್ತದೆ. ಹೀಗಾಗಿ ಯಾವುದೇ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಆಸಕ್ತರು ರಕ್ತದಾನ ಶಿಬಿರಗಳಲ್ಲಿ ಇಲ್ಲವೆ ರಕ್ತ ನಿಧಿ ಘಟಕಗಳಲ್ಲಿ ರಕ್ತದಾನ ಮಾಡಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries