ಬದಿಯಡ್ಕ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ಪರಿಸರದ ಬಗ್ಗೆ ವಿಶೇಷ ಕಾಳಜಿಯಿರುವ ಲಕ್ಷಿö್ಮÃಶ ಮುಳ್ಳೇರಿಯ ವಿವಿಧ ಜಾತಿಯ ಗಿಡಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಪೋಷಕರಿಗೆ ಹಸ್ತಾಂತರಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಗಣಪತಿ ಭಟ್ ಅದ್ರುಗುಳಿ, ಅಧ್ಯಾಪಕ ವೃಂದದ ವಿನಯ ಪಾಲ್, ಗಣೇಶ ಆಚಾರ್ಯ, ಪೋಷಕರು ಉಪಸ್ಥಿತರಿದ್ದರು. ಹೈಸ್ಕೂಲು ವಿಭಾಗ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಪ್ರಬಂಧ ಮಂಡಿಸಿದರು. ಈ ಹಿಂದೆ ಪರಿಸರ ದಿನಾಚರಣೆಯ ಅಂಗವಾಗಿ ನೆಟ್ಟಿರುವ ಗಿಡಗಳ ಬೆಳವಣಿಗೆಯ ಬಗ್ಗೆ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಅವಲೋಕನ ಮಾಡಲಾಯಿತು. ಅಧ್ಯಾಪಿಕೆ ಸರೋಜ ಕಾಂತಲ ನೇತೃತ್ವ ವಹಿಸಿದ್ದರು.