ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಗ್ರಂಥಾಲಯ ವಿಭಾಗದ ಆಶ್ರಯದಲ್ಲಿ ಡಿ ಸ್ಪೇಸ್ ಸಾಫ್ಟ್‍ವೇರ್ ಬಳಸಿ ಡಿಜಿಟಲ್ ಲೈಬ್ರರಿಯ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ' ಜುಲೈ 3 ಮತ್ತು 4 ರಂದು ನಡೆಯಲಿರುವುದು. ಪ್ರಭಾರ ಉಪಕುಲಪತಿ ಪೆÇ್ರ.ವಿನ್ಸೆಂಟ್ ಮ್ಯಾಥ್ಯೂ ಸಮಾರಂಭ ಉದ್ಘಾಟಿಸುವರು. ಕಾಯಾಗಾರದಲ್ಲಿ ಗ್ರಂಥಾಲಯ ವೃತ್ತಿಪರರು, ಮಾಹಿತಿ ವಿಜ್ಞಾನಿಗಳು ಮುಂತಾದವರು ಭಾಗವಹಿಸಬಹುದಾಗಿದೆ. ನೋಂದಣಿ ಶುಲ್ಕ 1500 ರೂ. ನಿಗದಿಪಡಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.cukerala.ac.in ಅನ್ನು ಭೇಟಿ ಮಾಡಬಹುದಾಗಿದೆ. ದೂರವಾಣಿ: 9495024044.