ನವದೆಹಲಿ :ಆಯುರ್ವೇದ, ಹೋಮಿಯೋಪಥಿ ಮತ್ತು ಇತರ ಸಾಂಪ್ರದಾಯಿಕ ವೈದ್ಯಪದ್ಧತಿಯ ಔಷಧಗಳ ಉತ್ಪಾದಕರು ಜಾಹೀರಾತು ನೀಡುವ ಮುನ್ನ ಸ್ವಯಂ ದೃಢೀಕೃತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯ ಎಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿದೆ.
ನವದೆಹಲಿ :ಆಯುರ್ವೇದ, ಹೋಮಿಯೋಪಥಿ ಮತ್ತು ಇತರ ಸಾಂಪ್ರದಾಯಿಕ ವೈದ್ಯಪದ್ಧತಿಯ ಔಷಧಗಳ ಉತ್ಪಾದಕರು ಜಾಹೀರಾತು ನೀಡುವ ಮುನ್ನ ಸ್ವಯಂ ದೃಢೀಕೃತ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯ ಎಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿದೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಕಡಿವಾಣ ಹಾಕುವ ಮತ್ತು ಗ್ರಾಹಕ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮೇ 7ರಂದು ತೀರ್ಪು ನೀಡಿ ಎಲ್ಲ ಜಾಹೀರಾತು ಮತ್ತು ಜಾಹೀರಾತು ನೀಡಿಕೆ ಏಜೆನ್ಸಿಗಳು ಯಾವುದೇ ಜಾಹೀರಾತು ಪ್ರಕಟಿಸುವ ಮತ್ತು ಪ್ರಸಾರ ಮಾಡುವ ಮುನ್ನ ಸ್ವಯಂ ದೃಢೀಕೃತ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಆದೇಶಿಸಿತ್ತು.
2024ರ ಜೂನ್ 18ರಿಂದ ಅನ್ವಯವಾಗುವಂತೆ ಎಲ್ಲ ಜಾಹೀರಾತುದಾರರು ಡಿಜಿಟಲ್ ಮತ್ತು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಸಾರ ಮಾಡುವ ಮುನ್ನ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿರುವ ಪ್ರಮಾಣಪತ್ರವನ್ನು ಬ್ರಾಡ್‍ಕಾಸ್ಟ್ ಸೇವಾ ಪೋರ್ಟೆಲ್ ಮೂಲಕ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸುವುದು ಕಡ್ಡಾಯ.
ಹೊಸ ನಿಯಮಾವಳಿಯ ಅನುಸಾಋ ಮೇ 31ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ಅವರಿಗೆ ಈ ಸಂಬಂಧ ಪತ್ರ ಬರೆದಿದೆ.