HEALTH TIPS

ಅಮಿತ ಪೊರೊಟೋ ಸೇವಿಸಿ ಐದು ಹಸುಗಳು ದುರ್ಮರಣ

                  ಕೊಲ್ಲಂ: ಮೇವಿನಲ್ಲಿ ಅಮಿತ ಪ್ರಮಾಣದಲ್ಲಿ ಪೊರೋಟಾ ತಿನ್ನಿಸಿದ್ದರಿಂದ ಐದು ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.  ಕೊಲ್ಲಂನ ವೆಲಿನಲ್ಲೂರಿನಲ್ಲಿ ಈ ಘಟನೆ ನಡೆದಿದೆ. ವಟ್ಟಪಾರ ಮೂಲದ ಹಸಬುಲ್ಲಾ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಹಸುಗಳು ಸಾವನ್ನಪ್ಪಿವೆ. 

                   ಶನಿವಾರ ಹಸಬುಲ್ಲಾ ಹಸುಗಳಿಗೆ ಪೊರೋಟ ಮತ್ತು ಹಲಸಿನ ಹಣ್ಣುಗಳ ಮೇವು ನೀಡಿದ್ದರು. ಸಂಜೆಯ ಹೊತ್ತಿಗೆ, ಹಸುಗಳು ಆಹಾರ ಸೇವಿಸದೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದವು. ಬಳಿಕ ಒಂದೊಂದೇ ಹಸುಗಳು ಸತ್ತವು. ಇದರಿಂದ ಪಶು ವೈದ್ಯರಿಗೆ ಮಾಹಿತಿ ನೀಡಿದ್ದಾರೆ.

               ಮರಣೋತ್ತರ ಪರೀಕ್ಷೆಯಲ್ಲಿ ಮಿತಿಮೀರಿದ ಪೊರೊಟೋ ಸೇವನೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಜಿಲ್ಲಾ ಪಶುವೈದ್ಯಕೀಯ ಕೇಂದ್ರದ ತುರ್ತು ಸ್ಪಂದನಾ ತಂಡವು ಸಂಕಷ್ಟದಲ್ಲಿದ್ದ ಇತರ ಹಸುಗಳಿಗೆ ಪ್ರಥಮ ಚಿಕಿತ್ಸೆ ನೀಡಿತು. ಜಮೀನಿಗೆ ಭೇಟಿ ನೀಡಿದ ನಂತರ ಸಚಿವ ಚಿಂಚುರಾಣಿ ಮಾತನಾಡಿ, ಗೋವಿನ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries