ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ ಇತಿಹಾಸ, ಸಸ್ಯಶಾಸ್ತ್ರ, ಅರೇಬಿಕ್, ಕಂಪ್ಯೂಟರ್ ಸಯನ್ಸ್ ಮುಂತಾದ ವಿಷಯಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಕಾಲೇಜು ವೆಬ್‍ಸೈಟ್ ಆದ www.gck.ac.in ನಲ್ಲಿ ನೀಡಿದ ಅರ್ಜಿಯನ್ನು ಭರ್ತಿ ಮಾಡಿ ಪ್ರಮಾಣಪತ್ರಗಳ ಪ್ರತಿ ಸಹಿತ ಜೂನ್ 24ರ ಸಂಜೆ 4ರ ಮೊದಲು ಕಾಲೇಝು ಪ್ರಾಂಶುಪಾಲರ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256027)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
………………………………………………………………………………………………………………………………………………………
ಇಂದು ಪಡ್ರೆ ಶಾಲೆಯಲ್ಲಿ ಶಿಕ್ಷಕರ ಹುದ್ದೆಗೆ ಸಂದರ್ಶನ
ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ತೆರವಾಗಿರುವ ರಾಜ್ಯಶಾಸ್ತ್ರ (ಸೀನಿಯರ್ ಮತ್ತು ಜೂನಿಯರ್) ಶಿಕ್ಷಕ ಹುದ್ದೆಗೆ ದಿನ ವೇತನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಜೂ.14ರಂದು ಬೆಳಗ್ಗೆ 10.30ಕ್ಕೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
………………………………………………………………………………………………………………………………….
ನಾಳೆ ಅಧ್ಯಾಪಕ ಸಂದರ್ಶನ:
ಕಾಸರಗೋಡು ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಹೈಸ್ಕೂಲ್ ವಿಭಾಗದಲ್ಲಿ ತೆರವಾಗಿರುವ ಸಮಾಜ ವಿಜ್ಞಾನ(ಕನ್ನಡ ಮಾಧ್ಯಮ)ಹುದ್ದೆಗೆ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ ಜೂ. 15ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಜರುಗಲಿದೆ. ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
……………………………………………………………………………………………………………………………….
ಕಾಟುಕುಕ್ಕೆ ಶಾಲೆ:
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎಚ್‍ಎಸ್‍ಎಸ್‍ಟಿ (ಎಚ್‍ಎಸ್‍ಎಸ್‍ಟಿ ಜೆಆರ್) ಜೂನಿಯರ್ ಕಾಮರ್ಸ್, ಎಚ್ ಎಸ್ ಎಸ್ ಟಿ ಜೂನಿಯರ್ (ಎಚ್‍ಎಸ್‍ಎಸ್‍ಟಿ ಜೆಆರ್) ಇಕನೊಮಿಕ್ಸ್, ಎಚ್ ಎಸ್ ಎಸ್ ಟಿ (ಎಚ್‍ಎಸ್‍ಎಸ್‍ಟಿ ಜೆಆರ್) ಜೂನಿಯರ್ ಸಂಸ್ಕøತ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರನ್ನು ನೇಮಿಸಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಅಸಲಿ ಪ್ರಮಾಣಪತ್ರಗಳೊಂದಿಗೆ ಜೂ. 20 ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.