HEALTH TIPS

ಜೂನ್ ಮೊದಲ ವಾರ ಆಕಾಶದಲ್ಲಿ ಗ್ರಹಗಳ ಮೆರವಣಿಗೆ..!

             ಡುಪಿ: ಜೂನ್ ಮೊದಲವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಅಪರೂಪಕ್ಕೆ ಕಾಣಲು ಸಿಗುವ ಆರು ಗ್ರಹಗಳ ಮೆರವಣಿಗೆಯನ್ನು ಬರಿಯ ಕಣ್ಣಿನಲ್ಲಿ ಕಾಣಬಹುದು ಎಂದು ಖಾತ್ಯ ಖಗೋಳ ವಿಜ್ಞಾನಿ, ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

         ಜೂನ್ 1ರಿಂದ ಪೂರ್ವ ಆಕಾಶಗಳಲ್ಲಿ ಬರೆಕಣ್ಣಿಗೆ ಕಾಣುವ ಶನಿ, ಮಂಗಳ, ಗುರು ಹಾಗೂ ಬುಧ ಗ್ರಹಗಳ ಜೊತೆಗೆ ದೂರದರ್ಶಕದಲ್ಲಿ (ಬೈನಾಕುಲರ್) ನೋಡಬಹುದಾದ ನೆಪ್ಚೂನ್ ಹಾಗೂ ಯುರೇನಸ್‌ಗಳೂ ಕಂಡುಬರುತ್ತವೆ. ಒಟ್ಟಿನಲ್ಲಿ ಈ ದೃಶ್ಯ ಗ್ರಹಗಳು ಒಟ್ಟಾಗಿ ಮೆರವಣಿಗೆ ಹೊರಟಿವೆಯೇ ಎಂಬಂತೆ ಕಂಡುಬರಲಿದೆ ಎಂದವರು ಹೇಳಿದ್ದಾರೆ.

          ಕೆಲವು ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರುಗ್ರಹ, ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರುಗ್ರಹದ ಜೊತೆ ಜೊತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರೆಕಣ್ಣಿಗೆ ಕಾಣಿಸುವುದಿಲ್ಲ. ವರ್ಷದಲ್ಲಿ ಬರೇ ಆರು ಬಾರಿ ಕೆಲ ದಿನಗಳು ಕೆಲ ನಿಮಿಷಗಳು ಮಾತ್ರ ಅದು ಕಂಡುಬರುತ್ತದೆ.

               ಸುಮಾರು ಸೂರ್ಯೋದಯಕ್ಕೆ 20 ನಿಮಿಷ ಮುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು, ಬುಧ, ಯುರೇನಸ್, ಮಂಗಳ, ನೆಪ್ಚೂನ್‌ನ ನಂತರ ಶನಿಗ್ರಹಗಳು ಗೋಚರಿಸಲಿವೆ.ಇವನ್ನೆಲ್ಲ ಪರಿಚಯಿಸಲೋ ಎನ್ನುವಂತೆ ಅಮವಾಸ್ಯೆಗೆ ಸೂರ್ಯನನ್ನ ಸಮೀಪಿಸುವ ಚಂದ್ರ, ಈ ಎಲ್ಲಾ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ.

ಜೂನ್ ಒಂದರಂದು ಶನಿಗ್ರಹದ ಸಮೀಪ, ಜೂನ್ 2ರಂದು ನೆಪ್ಚೂನ ಮಂಗಳಗಳ ಸಮೀಪ, ಜೂನ್ 3ರಂದು ಯುರೇನಸ್ ಸಮೀಪ ಸರಿದು ಜೂನ್ 4ರಂದು ಗುರು ಬುಧರ ಸಮೀಪ ಚಂದ್ರ ಕಾಣಲು ಸಿಗುತ್ತದೆ. ಈ ಆಕಾಶದ ಭವ್ಯತೆಗೆ ಹಣತೆಯಂತೆ ಕಾಣುವ ಬೆಳಗಿನ ಚಂದ್ರ ಎಲ್ಲರನ್ನೂ ಆಕರ್ಷಿಸಲಿದೆ.

             ಆಶ್ಚರ್ಯವೆಂದರೆ ಈಗ ಸುಮಾರು 3ಲಕ್ಷದ 70 ಸಾವಿರ ಕಿಮೀ ದೂರದ ಚಂದ್ರ ಕೋಟಿ ಕೋಟಿ ಕಿಮೀ ದೂರದ ಗ್ರಹಗಳ ಜೊತೆ (ಇಂದು ಬುಧ ಗ್ರಹ 17.5 ಕೋಟಿ ಕಿಮೀ, ಮಂಗಳ 27.8 ಕೋಟಿ ಕಿಮೀ, ಗುರು ಗ್ರಹ 90 ಕೋಟಿ ಕಿಮೀ, ಶನಿಗ್ರಹ 146.5 ಕೋಟಿ ಕಿಮೀ ದೂರದಲ್ಲಿದೆ) ಒಂದೇ ದೂರದಲ್ಲಿರುವಂತೆ ಕಾಣುವುದು ವಿಶೇಷ. ಈ ಎಲ್ಲವನ್ನೂ ಬೆಳಗಿನ ಆಕಾಶದಲ್ಲಿ ನೋಡಿ ಆನಂದಿಸುವಂತೆ ಆಸಕ್ತ ಆಕಾಶಕಾಯ ವೀಕ್ಷಕರಿಗೆ ಡಾ.ಎ.ಪಿ.ಭಟ್ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries