HEALTH TIPS

ಮೂರು ನಿಮಿಷದಲ್ಲಿ ಭಗವದ್ಗೀತೆ ಶ್ಲೋಕ ರಚನೆ-ವಿಶ್ವದಾಖಲೆಯತ್ತ ಶ್ರೀಭಾರತೀ ವಿದ್ಯಾಪೀಠ ವಿದ್ಯಾರ್ಥಿಗಳ ದಾಪುಗಾಲು

               ಬದಿಯಡ್ಕ: ಭಗವದ್ಗೀತೆಯ 18 ಅಧ್ಯಾಯಗಳ 700ಶ್ಲೋಕಗಳನ್ನು ಮೂರು ನಿಮಿಷಗಳಲ್ಲಿ ಬರೆಯುವ ಮೂಲಕ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಇಂಟರ್‍ನ್ಯಾಶನಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಸಾಧನೆಯೊಂದನ್ನು ದಾಖಲಿಸಿದ್ದಾರೆ. ಇಂಟನ್ರ್ಯಾಷನಲ್ ಬುಕ್ ಆಪ್ ರೆಕಾರ್ಡ್ ಅಮೃತಸರ ಪಂಜಾಬ್ ಸಂಸ್ಥೆಯವರ ಅನುಮೋದನೆ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.

            ಮಂಗಳೂರಿನ ಸ್ವರೂಪ ಶಿಕ್ಷಣ ಸಂಸ್ಥೆಯ ನಿರ್ದೇಶ ಹಾಗೂ ಪ್ರೇರಣೆಯೊಂದಿಗೆ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ಏಳುನೂರು ಶ್ಲೋಕಗಳನ್ನು ಮೂರು ನಿಮಿಷದೊಳಗೆ ಬರೆಯಲು  ನೂರು ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ವಿದ್ಯಾರ್ಥಿಗೆ ತಲಾ ಏಳು ಶ್ಲೋಕಗಳನ್ನು ನೀಡಲಾಗಿದ್ದು, ಇದನ್ನು ಸಂಸ್ಕøತದಲ್ಲೇ ಬರೆಯಬೇಕು. ಪ್ರತಿ ವಿದ್ಯಾರ್ಥಿಗೆ ಒಂದರಿಂದ ನೂರರ ವರೆಗೆ ನೋಂದಾವಣಾ ಸಂಖ್ಯೆಯನ್ನು ನೀಡಲಾಗಿತ್ತು.  


          ಸುದರ್ಶನಚಕ್ರ ಹೊತ್ತ ಭಗವಾನ್ ಶ್ರೀಕೃಷ್ಣನ ಸಂಪೂರ್ಣ ಛಾಯಾಚಿತ್ರ ಹೊಂದಿದ ಹಾಳೆಯ ಒಂದೊಂದು ತುಣುಕನ್ನು ವಿದ್ಯಾರ್ಥಿಗಳ ಕೈಗೆ ನೀಡಲಾಗಿತ್ತು. ಆಯಾ ಸಂಖ್ಯೆಗೆ ಅನುಗುಣವಾಗಿ ಒಂದೊಂದು ಶ್ಲೋಕವನ್ನು ವಿದ್ಯಾರ್ಥಿಗೆ ಮೊದಲೇ ಒದಗಿಸಲಾಗಿತ್ತು. ಮೂರು ನಿಮಿಷದೊಳಗೆ ಈ ಶ್ಲೋಕವನ್ನು ಆಯಾ ಸಂಖ್ಯೆಯ ಹಾಳೆಯಲ್ಲಿ  ಬರೆದು ಮುಗಿಸಬೇಕು. ಇದನ್ನು ಖಚಿತಪಡಿಸಲು ನ್ಯಾಶನಲ್ ಬುಕ್ ಆಫ್ ರೆಕಾರ್ಡ್‍ನ ನಿರ್ದೇಶದನ್ವಯ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳಬೇಕು. ಜತೆಗೆ ಈ ಎಲ್ಲ ಪ್ರಕ್ರಿಯೆಯನ್ನೂ ವಿಡಿಯೋ ಚಿತ್ರೀಕರಣ ನಡೆಸಿ,  ಇಂಟರ್‍ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿಕೊಡಬೇಕು ಎಂಬುದು ನಿಬಂಧನೆ.

          ವಿದ್ಯಾರ್ಥಿಗಳು ನಿಗದಿತ ಕಾಲಾವಧಿಯೊಳಗೆ ಭಗವದ್ಗೀತೆ ಶ್ಲೋಕಗಳನ್ನು ಬರೆದು ಮುಗಿಸಿದ್ದಾರೆ. ಜತೆಗೆ ಶ್ರೀಕೃಷ್ಣನ ಛಾಯಾಚಿತ್ರ ಒಳಗೊಂಡ ಬೃಹತ್ ಫ್ಲೆಕ್ಸ್‍ನಲ್ಲಿ ಒಂದರಿಂದ ನೂರು ಸಂಖ್ಯೆ ವರೆಗಿನ ಮಕ್ಕಳು ಆಯಾ ಜಾಗದಲ್ಲಿ ತಮಗೆ ನೀಡಿದ ಶ್ಲೋಕಗಳನ್ನು ಬರೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಮತ್ತು ಬಳಗ ಸೇರಿ ಈ ವಿಶ್ವದಾಖಲೆ ವಿನ್ಯಾಸವನ್ನು ನಡೆಸಿಕೊಟ್ಟಿದ್ದಾರೆ. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಸೀನಿಯರ್ ಸುಪರಿಡೆಂಟ್ ಕರುಣಾಕರ್, ಶಾಲಾ ವ್ಯವಸ್ಥಾಪಕ ಜಯಪ್ರಕಾಶ್ ಪಜಿಲ, ಶಾಲಾ ಆಡಳಿತ ಮಂಡಳಿ ಸಮಿತಿ ಸದಸ್ಯ ಮಧುಸೂದನ್, ರಶ್ಮೀ ಪೆರ್ಮುಖ, ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಪಂಜಿತ್ತಡ್ಕ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries