ಕೆಲ ಜನರಿಗೆ ಕೆಮ್ಮುವಾಗ ಅಥವಾ ಸೀನುವಾಗ ಮೂತ್ರ ಸೋರಿಕೆಯಾಗುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮತ್ತು ಮಕ್ಕಳಿಗೆ ಜನ್ಮ ನೀಡಿದ ನಂತರ ಪೆಲ್ವಿಕ್ ಪ್ರದೇಶ ತುಂಬಾ ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳಿರುತ್ತವೆ.

ಮುಖ್ಯವಾಗಿ 90 ಪ್ರತಿಶತ ಮಹಿಳೆಯರು ಮೂತ್ರ ಸೋರಿಕೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಏಕೆಂದರೆ ಮಗು ಜನಿಸಿದಾಗ ಪೆಲ್ವಿಕ್ ಪ್ರದೇಶವು ಹಿಗ್ಗುತ್ತದೆ. ಹೀಗಾಗಿ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಗುವಿನ ಜನನದ ನಂತರ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ.
ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಒಂದು ಸಲಹೆಯನ್ನು ಅನುಸರಿಸಿ. ಸಮಯ ಸಿಕ್ಕಾಗಲೆಲ್ಲಾ ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ತಿಂಗಳೊಳಗೆ ನಿಮ್ಮ ಸಮಸ್ಯೆ ದೂರವಾಗುತ್ತದೆ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಉಸಿರನ್ನು ಹೊರಗೆಳೆದು ನಿಧಾನವಾಗಿ ಹೊರಬಿಡುವ ವ್ಯಾಯಾಮವನ್ನು ನಿಯಮಿತವಾಗಿ ಮಾಡಿದರೆ ಮೂತ್ರ ಸೋರಿಕೆಯ ಸಮಸ್ಯೆ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಇನ್ನು ಮುಖ್ಯವಾದ ಸಂಗತಿ ಏನೆಂದರೆ, ಕೆಲ ಮಹಿಳೆಯರು ವೈದ್ಯರ ಬಳಿ ಈ ಸಮಸ್ಯೆಯನ್ನು ಹೇಳಲು ನಾಚಿಕೆಪಡುತ್ತಾರೆ. ಆದರೆ, ಆ ರೀತಿ ನಾಚಿಕೆಯಿಂದ ಇದ್ದರೆ ಆರೋಗ್ಯ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವುದೇ ವಿಷಯವನ್ನು ವೈದ್ಯರ ಬಳಿ ಮುಕ್ತವಾಗಿ ಹೇಳಬೇಕು. ಈ ಹೀಲಿಂಗ್ ವ್ಯಾಯಾಮವನ್ನು ದಿನಕ್ಕೆ 10 ಬಾರಿ ಮಾಡುವುದರಿಂದ ಒಂದು ತಿಂಗಳೊಳಗೆ ಮಹಿಳೆಯರು ಮೂತ್ರ ಸೋರಿಕೆ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.