ಪತ್ತನಂತಿಟ್ಟ: ಅಕ್ರಮ ಖಾಸಗಿ ವೈದ್ಯಕೀಯ ಸೇವೆ ವಿರುದ್ಧ ರಾಜ್ಯಾದ್ಯಂತ ವಿಜಿಲೆನ್ಸ್ ದಾಳಿ ನಡೆದಿದೆ. ಪತ್ತನಂತಿಟ್ಟದಲ್ಲಿ ಪರಿಶೀಲನೆಗೆ ಬಂದಿದ್ದ ಜಾಗೃತ ದಳವನ್ನು ನೋಡಿ ಇಬ್ಬರು ವೈದ್ಯರು ಓಡಿ ಕಾಲ್ಕಿತ್ತ ಘಟನೆ ನಡೆದಿದೆ. ಪರಾರಿಯಾದವರಲ್ಲಿ ಪತ್ತನಂತಿಟ್ಟ ಜನರಲ್ ಆಸ್ಪತ್ರೆಯ ಮಹಿಳಾ ವೈದ್ಯೆ ಸೇರಿದ್ದಾರೆ.
ಆಸ್ಪತ್ರೆಯ ಖಾಸಗಿ ಕಾಂಪ್ಲೆಕ್ಸ್ ನಲ್ಲಿ ವೈದ್ಯರು ಚಿಕಿತ್ಸೆ ನಿರ್ವಹಿಸುತ್ತಿದ್ದರು. ಇದು ಸರ್ಕಾರ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ. ಖಾಸಗಿ ಸೇವೆಗೆ ಸಂಬAಧಿಸಿದAತೆ ಆರೋಗ್ಯ ಇಲಾಖೆ ನಿಯಮಾವಳಿಗಳನ್ನು ಹೊರಡಿಸಿದೆ.
ಅಕ್ರಮ ನಡೆಸಿರುವ ಆರು ವೈದ್ಯರ ವಿರುದ್ಧ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ವಿಜಿಲೆನ್ಸ್ ಮಾಹಿತಿ ನೀಡಿದೆ. ಓಡಿ ಹೋದ ವೈದ್ಯರನ್ನು ಗುರುತಿಸಲು ಸಾಧ್ಯವಾಗದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ.