ಲಖನೌ: ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ತಂದೆಯ ಆಸೆಯನ್ನು ಈಡೇರಿಸಿದ ಪುತ್ರಿಯರು, ರೋಗಿಗಳಿದ್ದ ಕೊಠಡಿಯಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ.

ಬಹುದಿನಗಳಿಂದ ತಮ್ಮ ಪುತ್ರಿಯರ ವಿವಾಹ ನೋಡಬೇಕೆಂದು ಬಯಸಿದ್ದ ತಂದೆ, ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಪಾಲಾಗಿದ್ದರು. ಈ ವೇಳೆ ತಾನು ಬದುಕುಳಿಯೋದು ಅನುಮಾನ ಎಂದು ತಿಳಿದು, ತನ್ನ ಇಬ್ಬರು ಪುತ್ರಿಯರ ಬಳಿ ತಮ್ಮ ಮಹಾದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಅರಿತ ಹೆಣ್ಣುಮಕ್ಕಳು, ಅಪ್ಪನ ಮಾತನ್ನು ಮೀರದೆ, ಐಸಿಯು ಕೊಠಡಿಯಲ್ಲಿಯೇ ಸರಳವಾಗಿ ಮದುವೆಯಾಗಿದ್ದಾರೆ.
ತಂದೆ ಜುನೈದ್ ಮಿಯಾನ್ ಅವರ ಆಸೆಯನ್ನು ಈಡೇರಿಸಿದ ಪುತ್ರಿಯರು, ಐಸಿಯು ಕೊಠಡಿಯಲ್ಲಿದ್ದ ಇತರೆ ರೋಗಿಗಳಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ಮಾಡದೆ, ಸರಳ ಉಡುಗೆ ತೊಟ್ಟು, ಹಾರ ಬದಲಾಯಿಸಿಕೊಂಡಿದ್ದಾರೆ. ಮದುವೆಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಾಕ್ಷಿಯಾಗಿರುವುದು ವೈರಲ್ ಆದ ದೃಶ್ಯಗಳಲ್ಲಿ ಕಂಡುಬಂದಿವೆ.
ವಿಶ್ವ ಅಪ್ಪಂದಿರ ದಿನದಂದೇ ಈ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ಬಹುದಿನದ ಆಸೆಯನ್ನು ಈಡೇರಿಸಿರುವುದು ಇದೀಗ ನೆಟ್ಟಿಗರ ಮನ ಸ್ಪರ್ಶಿಸಿದ್ದು, ನಿಮ್ಮ ತ್ಯಾಗ, ಪ್ರೀತಿಗೆ ನಮ್ಮದೊಂದು ಸಲಾಂ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ.