ಕೀವ್: ದೇಶದಿಂದ ಪಲಾಯನ ಮಾಡಲು ಯತ್ನಿಸಿದ ಹಲವರನ್ನು ಬಂಧಿಸಿರುವುದಾಗಿ ಉಕ್ರೇನ್ ಗಡಿ ಭದ್ರತಾ ಪಡೆ ಶುಕ್ರವಾರ ತಿಳಿಸಿದೆ.
ಕೀವ್: ದೇಶದಿಂದ ಪಲಾಯನ ಮಾಡಲು ಯತ್ನಿಸಿದ ಹಲವರನ್ನು ಬಂಧಿಸಿರುವುದಾಗಿ ಉಕ್ರೇನ್ ಗಡಿ ಭದ್ರತಾ ಪಡೆ ಶುಕ್ರವಾರ ತಿಳಿಸಿದೆ.
ರಷ್ಯಾ ವಿರುದ್ಧ ಹೋರಾಟ ನಡೆಸಲು ದೇಶದ ನಾಗರಿಕರನ್ನು ಕಡ್ಡಾಯವಾಗಿ ಸೇನೆಗೆ ನೋಂದಣಿ ಮಾಡಿಕೊಳ್ಳುವ ಕಾನೂನನ್ನು ಉಕ್ರೇನ್ ಕಳೆದ ತಿಂಗಳು ಜಾರಿಗೊಳಿಸಲಾಗಿದೆ.
ರಷ್ಯಾ ಸೇನೆ ಆಕ್ರಮಣ ಆರಂಭಿಸಿದಾಗಿನಿಂದ ಉಕ್ರೇನ್‌ನ 18 ರಿಂದ 60 ವರ್ಷದ ಪುರುಷರಿಗೆ ದೇಶದಿಂದ ಹೊರಹೋಗಲು ನಿರ್ಬಂಧ ವಿಧಿಸಲಾಗಿದೆ.
ಒಡೆಶಾ ಪ್ರಾಂತ್ಯದಲ್ಲಿರುವ ಗಡಿ ಭದ್ರತಾ ಸಿಬ್ಬಂದಿ, ಉಕ್ರೇನ್‌ನ 12 ಪ್ರಾಂತ್ಯಗಳಿಗೆ ಸೇರಿದ 41 ನಾಗರಿಕರನ್ನು ಮಾಲ್ಡೊವಾ ಮತ್ತು ರೊಮಾನಿಯಾ ಗಡಿಗಳಲ್ಲಿ ಪತ್ತೆ ಮಾಡಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ನೆರೆಯ ಹಂಗೇರಿಗೆ ಪಲಾಯನ ಮಾಡಲು ಯತ್ನಿಸಿದ್ದ ಉಕ್ರೇನ್‌ನ 38 ಮಂದಿಯನ್ನು ಭದ್ರತಾ ಸಿಬ್ಬಂದಿ ಫೆಬ್ರುವರಿಯಲ್ಲಿ ತಡೆದಿದ್ದರು
ರಷ್ಯಾ ಸೇನೆ, 2022ರ ಫೆಬ್ರುವರಿಯಿಂದ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದೆ.