ಹಿಂದೆ ಗಂಜಿ, ಕಂಜಿ ನೀರು ಕುಡಿಯುತ್ತಿದ್ದ ಕಾಲವೊಂದಿತ್ತು. ಇದು ಪ್ರಾಚೀನರ ಆರೋಗ್ಯದ ಗುಟ್ಟು ಕೂಡ ಆಗಿತ್ತು.
ಆದರೆ ಇಂದು ಅನ್ನ ಬೆಂದ ನಂತರ ಉಳಿದ ಗಂಜಿ ನೀರನ್ನು ಸುಮ್ಮನೆ ಬಿಸಾಡುವುದು, ಹಸು, ಆಡುಗಳಿಗೆ ನೀಡುವುದು ವಾಡಿಕೆ. ಬದಲಾಗಿ ನಾವು ಪ್ರತಿದಿನ ಎನರ್ಜಿ ಡ್ರಿಂಕ್ಸ್ ಕುಡಿಯುತ್ತೇವೆ. ಆರೋಗ್ಯ ಸಮಸ್ಯೆ ಉಂಟು ಮಾಡುವ ಇಂತಹ ಎನರ್ಜಿ ಡ್ರಿಂಕ್ ಗಳಿಂದ ದೂರವಿರಿ ಮತ್ತು ವ್ಯರ್ಥವಾದ ಗಂಜಿ ನೀರನ್ನೇ ಕುಡಿದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಗಂಜಿ ನೀರು ವಿಟಮಿನ್ ಇ, ಮೆಗ್ನೀಸಿಯಮ್, ಫೈಬರ್, ಸತು ಮತ್ತು ಮ್ಯಾಂಗನೀಸ್ ಗಳ ಉಗ್ರಾಣವಾಗಿದೆ. ಪ್ರತಿದಿನ ಒಂದು ಲೋಟ ಗಂಜಿ ನೀರನ್ನು ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದು ಅಧಿಕ ತೂಕವನ್ನು ನಿಯಂತ್ರಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಂಜಿ ನೀರಿನಲ್ಲಿ ಕ್ಯಾಲೋರಿ ಕಡಮೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಗಂಜಿ ನೀರನ್ನು ಕುಡಿಯಬೇಕು.
ಜೀರ್ಣಕ್ರಿಯೆಯ ಸಮಸ್ಯೆಗಳಿಗೂ ಗಂಜಿ ನೀರು ಒಳ್ಳೆಯದು. ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ನಿಯಂತ್ರಿಸುತ್ತದೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಗಂಜಿ ನೀರು ಕುಡಿಯುವುದು ಹಸಿವನ್ನು ನಿಯಂತ್ರಿಸಲು ಮತ್ತು ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಲು ಒಳ್ಳೆಯದು. ಹಸಿವನ್ನು ನಿಯಂತ್ರಿಸುವ ಮೂಲಕ, ಆಗಾಗ್ಗೆ ಊಟ ಮಾಡುವ ಅಭ್ಯಾಸವನ್ನು ತಪ್ಪಿಸಬಹುದು. ಗಂಜಿ ನೀರಿಗೆ ಸ್ವಲ್ಪ ಮೊಸರು ಸೇರಿಸಿ ಮತ್ತು ಉಪ್ಪಿನೊಂದಿಗೆ ಕುಡಿಯುವುದರಿಂದ ದಿನವಿಡೀ ಶಕ್ತಿಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ.