ಒಟ್ಟಾವಾ: ಇಬ್ಬರು ಖಾಲಿಸ್ತಾನಿ ಮೂಲಭೂತವಾದಿಗಳ ವಿಮಾನಯಾನಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಲು ಕೆನಡಾದ ಕೋರ್ಟ್ ನಿರಾಕರಿಸಿದೆ.
ಒಟ್ಟಾವಾ: ಇಬ್ಬರು ಖಾಲಿಸ್ತಾನಿ ಮೂಲಭೂತವಾದಿಗಳ ವಿಮಾನಯಾನಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಲು ಕೆನಡಾದ ಕೋರ್ಟ್ ನಿರಾಕರಿಸಿದೆ.
ಭಗತ್ ಸಿಂಗ್ ಬ್ರಾರ್ ಮತ್ತು ಪರ್ವ್‌ಕರ್ ಸಿಂಗ್ ದುಲೈ ಅವರು ಸಲ್ಲಿಸಿದ್ದ ಮನವಿಯನ್ನು ಕೆನಡಾದ ಫೆಡರಲ್ ಕೋರ್ಟ್ ಕಳೆದ ವಾರ ವಜಾ ಮಾಡಿದೆ.
ಈ ಇಬ್ಬರಿಗೂ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರೆ, ಭಯೋತ್ಪಾದನೆ ಆದೀತೆಂಬ ಆತಂಕಕ್ಕೆ ಸಕಾರಣವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆನಡಾದ ವಿಮಾನಯಾನ ಭದ್ರತಾ ಕಾಯ್ದೆಯಡಿ ಇವರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು ಎಂದು ಕೆನಡಾದ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ಈ ಇಬ್ಬರೂ ವ್ಯಾಂಕೋವರ್‌ನಿಂದ ಪ್ರಯಾಣಿಸಲು 2018ರಲ್ಲಿ ಅನುಮತಿ ನಿರಾಕರಿಸಲಾಗಿತ್ತು. 2019ರಲ್ಲಿ ಈ ಇಬ್ಬರೂ ಫೆಡರಲ್ ಕೋರ್ಟ್ ಮೆಟ್ಟಿಲೇರಿದ್ದರು. ಇವರ ವಿರುದ್ಧವಾಗಿ ನ್ಯಾಯಮೂರ್ತಿ ಸೈಮನ್ ನೋಯೆಲ್ 2022ರಲ್ಲಿ ಆದೇಶ ನೀಡಿದ್ದರು.