HEALTH TIPS

ಮದ್ಯದ ಬಾಟಲಿಗೆ ಅಂಟಿಸುವ ಸ್ಟಿಕ್ಕರ್ ರಾಶಿ: ಸೌದಿಯಲ್ಲಿ ಕೇರಳೀಯ ಫುಟ್ಬಾಲ್ ಆಟಗಾರನ ಬಂಧನ

                 ರಿಯಾದ್: ಮದ್ಯದ ಬಾಟಲಿಗೆ ಅಚಿಟಿಸುವ ಸ್ಟಿಕ್ಕರ್ ಗಳು ಬೃಹತ್ ಪ್ರಮಾಣದಲ್ಲಿ ಕಂಡುಬಂದ ಕಾರಣ ಸೌದಿ ಅರೇಬಿಯಾದ ಅಬಹಾ ವಿಮಾನ ನಿಲ್ದಾಣದಲ್ಲಿ ಕೇರಳೀಯ ಫುಟ್‍ಬಾಲ್ ಆಟಗಾರನನ್ನು ಬಂಧಿಸಲಾಗಿದೆ.

              ಅನಿವಾಸಿ ಸಂಸ್ಥೆಗಳು ಆಯೋಜಿಸಿದ್ದ ಫುಟ್ಬಾಲ್ ಪಂದ್ಯದಲ್ಲಿ ಪ್ರಮುಖ ಕೇರಳೀಯ ತಂಡದ ಪರ ಆಡಲು ಯುವಕ ಬಂದಿದ್ದ. ಬೇರೆ ಬೇರೆ ತಂಡಗಳಿಗೆ ಆಡಲು ಸೌದಿಗೆ ಆಗಾಗ ಬರುತ್ತಿರುವವರು ಇವರು. ಘಟನೆಯ ಕುರಿತು ಸೌದಿ ಪೋಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.

               ಪಂದ್ಯಾವಳಿಗಳಲ್ಲಿ ಆಡಲು ಕೋಝಿಕ್ಕೋಡ್‍ನಿಂದ ಏರ್ ಅರೇಬಿಯಾ ವಿಮಾನದಲ್ಲಿ ಐವರು ಅಬಹಾದಲ್ಲಿ ಬಂದಿಳಿದರು. ಅವರಲ್ಲಿ ಒಬ್ಬರು ಭದ್ರತಾ ಪಡೆಗಳ ವಶದಲ್ಲಿದ್ದಾರೆ. ಸ್ಟಿಕ್ಕರ್ ಅನ್ನು ಕೇರಳದಿಂದ ಯಾರು, ಯಾಕೆ, ಯಾರಿಗೆ ವಿತರಿಸಲು ಕಳಿಸಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕಲ್ಲಿದೆ. 

              ಮಾದಕ ದ್ರವ್ಯ ಕಳ್ಳಸಾಗಣೆ ತಡೆಯಲು ಸೌದಿ ವಿಮಾನ ನಿಲ್ದಾಣಗಳು ತಪಾಸಣೆಯನ್ನು ಬಿಗಿಗೊಳಿಸಿವೆ. ಮೂರು ಸ್ಕ್ಯಾನರ್‍ಗಳ ಮೂಲಕ ಹಾದುಹೋದ ನಂತರವಷ್ಟೇ ಬ್ಯಾಗೇಜ್ ಗಳನ್ನು ತೆರವುಗೊಳಿಸಲಾಗುತ್ತದೆ. ಸೌದಿ ಅರೇಬಿಯಾ ಮದ್ಯಪಾನವನ್ನು ನಿಷೇಧಿಸಿರುವ ದೇಶವಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries