HEALTH TIPS

ನೀವೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಿ: ಯಾಕೆ ಗೊತ್ತಾ?

 ಗ ಮಧುಮೇಹ ಸಾಮಾನ್ಯವಾಗಿದೆ. ಇದರ ಜತೆ ಹೊಡೆದಾಡಿಕೊಂಡೇ ಬದುಕುವ ದೊಡ್ಡ ಸಮೂಹವೇ ಇದೆ. ಇದನ್ನು ವಾಸಿ ಮಾಡಲು ಸಾಧ್ಯವಾಗದ ಕಾರಣ ನಿಯಂತ್ರಣ ಮಾಡಿಕೊಂಡು ಬದುಕುವುದು ಅನಿವಾರ್ಯವಾಗಿದೆ. ಆದರೆ ಬಹಳಷ್ಟು ಜನ ನನಗೇನು ಆಗಿಲ್ಲ ಹೀಗಾಗಿ ನಾನೇಕೆ ಮಧುಮೇಹ ಪರೀಕ್ಷೆ ಮಾಡಬೇಕು ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ.

ಅಂತಹವರಿಗೆ ಯಾವುದಕ್ಕೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುತ್ತಾರೆ ವೈದ್ಯರು.

ನಿಜ ಹೇಳಬೇಕೆಂದರೆ ಮಧುಮೇಹ ಈಗ ಹೆಚ್ಚಿನ ಜನರನ್ನು ಕಾಡುತ್ತಿರುವ ಒಂದು ರೋಗ. ಇದು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಇದು ನಮ್ಮನ್ನು ಕಾಡಲು ಹಲವು ಕಾರಣಗಳು ಇಲ್ಲದಿಲ್ಲ. ಮುಖ್ಯವಾಗಿ ಒತ್ತಡದ ಜೀವನ, ನಿತ್ಯ ಬದುಕಿನಲ್ಲಿನ ಅಶಿಸ್ತು ಜತೆಗೆ ವಂಶಪಾರಂಪರ್ಯತೆಯೂ ಮಧುಮೇಹ ಅಡರಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಇಲ್ಲಿ ನಾವು ಮಧುಮೇಹ ಬಂತೆಂದು ಭಯಪಡಬೇಕಾಗಿಲ್ಲ. ನಮ್ಮ ಜೀವನ ಕ್ರಮದಲ್ಲಿ ಒಂದಷ್ಟು ಅಗತ್ಯ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.


ಇವತ್ತು ಹೆಚ್ಚಿನ ಜನ ಮಧುಮೇಹದ ಬಗ್ಗೆ ಮತ್ತು ಅದರ ನಿಯಂತ್ರಣದ ಬಗ್ಗೆ ವೈದ್ಯರು ನೀಡುವ ಸಲಹೆಯಂತೆ ನಡೆದುಕೊಳ್ಳದ ಕಾರಣದಿಂದಾಗಿ ಮಧುಮೇಹ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜೊತೆಗೆ ಅದರಿಂದ ಬೇರೆ ಕಾಯಿಲೆಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಹಲವರು ಇಲ್ಲಿ ವೈದ್ಯರು ಏನನ್ನು ಮಾಡಬಾರದು ಎಂದು ಹೇಳಿರುತ್ತಾರೆಯೋ ಅದನ್ನೇ ಹೆಚ್ಚಾಗಿ ಮಾಡುವುದರಿಂದ ಕಾಯಿಲೆ ನಿಯಂತ್ರಣಕ್ಕೆ ಬಾರದೆ ಒದ್ದಾಡುವುದು ಕಂಡು ಬರುತ್ತಿದೆ.

ಯಾರೆಲ್ಲ ಪರೀಕ್ಷೆ ಮಾಡಿಸಿಕೊಳ್ಳಬೇಕು?

ಆಧುನಿಕ ಜಗತ್ತಿನಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು ಈ ಪೈಕಿ ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿರುವುದು ದುರಂತದ ಸಂಗತಿಯಾಗಿದೆ. ಇನ್ನೊಂದು ಬಹಳಷ್ಟು ಜನಕ್ಕೆ ತಿಳಿಯದ ವಿಷಯವೇನೆಂದರೆ ಮಧುಮೇಹ ತಮಗೆ ಇದೆ ಎಂದು ಗೊತ್ತಾಗುವ ಸುಮಾರು ಹತ್ತು ಹನ್ನೆರಡು ವರ್ಷದ ಮೊದಲೇ ಕಾಯಿಲೆ ದೇಹದಲ್ಲಿರುತ್ತದೆಯಂತೆ. ಆದರೆ ಇದರ ಗುಣ ಲಕ್ಷಣಗಳನ್ನು ಹೊರಹಾಕದ ಕಾರಣಗಳಿಂದಾಗಿ ಕಾಯಿಲೆ ತನಗಿದೆ ಎಂಬುದೇ ಗೊತ್ತಾಗುವುದಿಲ್ಲವಂತೆ.

ಹೀಗಾಗಿಯೇ ತನಗೇನು ಮಧುಮೇಹವಿಲ್ಲ ಎನ್ನುವ ಮಂದಿ ಯಾವುದಕ್ಕೂ ಒಮ್ಮೆ ರಕ್ತಪರೀಕ್ಷೆ ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಎಂತಹ ವ್ಯಕ್ತಿಗಳಲ್ಲಿ ಮಧುಮೇಹ ಇರಬಹುದು ಎಂಬ ಸಂಶಯ ಬರುತ್ತದೆ ಎನ್ನುವುದನ್ನು ನೋಡುವುದಾದರೆ, ಈಗಾಗಲೇ ತಂದೆ, ತಾಯಿಗೆ ಮಧುಮೇಹವಿದ್ದರೆ, ಅತಿಯಾದ ಬೊಜ್ಜು ಹೊಂದಿರುವವರು. ಮಧುಮೇಹದ ಪರೀಕ್ಷೆ ಒಮ್ಮೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಇನ್ನೊಂದಷ್ಟು ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ

ಇದೆಲ್ಲದರ ನಡುವೆ ಮಧುಮೇಹಿ ರೋಗಿಗಳು ಮೂರು ತಿಂಗಳಿಗೊಮ್ಮೆ (ಸರಾಸರಿ ರಕ್ತ ಸಕ್ಕರೆ ಪ್ರಮಾಣವನ್ನು ಅರಿಯಲು) ಎಚ್ಬಿಎ1ಸಿ ಪರೀಕ್ಷೆ ಮಾಡಿಕೊಳ್ಳುವುದು ಒಳಿತು. ಇದರ ಜತೆಗೆ ಆಗಾಗ್ಗೆ ಪಾದಪರೀಕ್ಷೆ, ವರ್ಷಕ್ಕೊಮ್ಮೆ ರಕ್ತಕೊಬ್ಬಿನಾಂಶ, ಮೂತ್ರದ ಮೈಕ್ರೋ ಅಲ್ಭುಮಿನ್ ಪರೀಕ್ಷೆ ಮಾಡಿಸಿ ಕೊಳ್ಳಬೇಕು, ಬಿಪಿಯನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳಬೇಕು. ಇನ್ನು ದೃಷ್ಠಿ ತೊಂದರೆಯಿದ್ದರೆ ಅಥವಾ ವಾರ್ಷಿಕವಾಗಿ ಕಣ್ಣುಪಾಪೆ(ರೆಟಿನಾ)ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಇದಲ್ಲದೆ ವರ್ಷಕ್ಕೊಮ್ಮೆ ಅಥವಾ ಅವಶ್ಯಕತೆ ಕಂಡು ಬಂದಾಗ ಇಸಿಜಿ, ಟಿಎಂಟಿ ಮತ್ತು ಎಕೋ ಕಾರ್ಡಿಯೋಗ್ರಾಫಿಯನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ.

ನಮಗೇನು ಕಾಯಿಲೆ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿರುವುದು ಒಳ್ಳೆಯದೇ ಆದರೂ ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ಅದು ಅಡರಿಕೊಳ್ಳಬಹುದು. ಹೀಗಾಗಿ ಪರೀಕ್ಷಿಸಿಕೊಂಡು ತಮಗೆ ಕಾಯಿಲೆ ಇಲ್ಲ ಎಂಬುದು ತಿಳಿದುಕೊಂಡು ಖುಷಿ ಪಡುವುದರಲ್ಲಿ ಅರ್ಥವಿದೆ. ಒಂದು ವೇಳೆ ಕಾಯಿಲೆಯ ಸೂಕ್ಷ್ಮತೆ ಕಂಡು ಬಂದರೆ ಕೆಲವೊಂದು ವಿಧಾನಗಳಿಂದ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಉದಾಸೀನ ಮನೋಭಾವ ಬಿಟ್ಟು ಪರೀಕ್ಷಿಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries