ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಸೋಮವಾರ ಪ್ರಯಾಣಿಕ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ರಾಷ್ಟ್ರದ ಅಗ್ನಿಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್‌ನಿಂದ ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಹೊರಟಿದ್ದ ವರ್ಜಿನ್ ಆಸ್ಟ್ರೇಲಿಯಾ ಬೋಯಿಂಗ್ 737- 800 ಪ್ರಯಾಣಿಕ ವಿಮಾನವು ಟೇಕ್ ಆಫ್ ಆದ ಬಳಿಕ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿತು.
ವಿಮಾನ ಹಾರಾಟ ಪ್ರಾರಂಭವಾದ 50 ನಿಮಿಷಗಳ ಬಳಿಕ ಅದು ಇನ್ವರ್‌ಕಾರ್ಗಿಲ್ ನಗರದ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು. ಕೂಡಲೇ ಅಗ್ನಿಶಾಮಕ ದಳಗಳು ಆಗಮಿಸಿ ಬೆಂಕಿ ನಂದಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ನಿಖರ ಕಾರಣ ಏನೆಂಬುದು ವರದಿಯಾಗಿಲ್ಲ.