ಕಾಸರಗೋಡು: ಹೊಸಕೋಟೆಯ ಶ್ರೀ ನವಚೇತನ ನೃತ್ಯಕಲಾ ಅಕಾಡೆಮಿ ಹಾಗೂ ವಿ.ಕೆ.ಆರ್. ನಾಟ್ಯಕಲಾ ಅಕಾಡೆಮಿ ಮೇಡಹಳ್ಳಿ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನ ಶ್ರೀರಾಮನಾಥ ಸಾಂಸ್ಕøತಿಕ ಪ್ರತಿಷ್ಠಾನ ಕೋಟೆಕಣಿ ಇದರ ಆಶ್ರಯದಲ್ಲಿ ‘ಸತ್ಯ ದರ್ಶನ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು.
ರಂಗ ನಿರ್ದೇಶಕ ಶಶಿ ಎದುರ್ತೋಡು ಅವರ ನಿರ್ದೇಶನದಲ್ಲಿ ಕಿರಣ್ ಕಲಾಂಜಲಿ ಬರೆದು, ಸಾಹಿತ್ಯ ನೀಡಿ ಪ್ರದರ್ಶನ ನೀಡಿದರು. ಶ್ರೀರಾಮನಾಥ ಸಾಂಸ್ಕøತಿಕ ಪ್ರತಿಷ್ಠಾನದ ನಿರ್ದೇಶಕ ಗುರುಪ್ರಸಾದ್ ಕೋಟೆಕಣಿ,ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು, ಶ್ರೀ ನವಚೇತನ ನೃತ್ಯಕಲಾ ಅಕಾಡೆಮಿ ನಿರ್ದೇಶಕ ಕೋಲಾರ ರಮೇಶ್, ನೃತ್ಯಗುರು ಕಲಾಶ್ರೀ ಸುವರ್ಣ ವೆಂಕಟೇಶ್, ಅನುರಾಧಾ, ರಾಮಬಾಣಂ ಪ್ರಸಾದ್ ಬಾಬು, ಅಶ್ವಿನಿ ಎನ್., ಅನಿಲ್ ಕುಮಾರ್ ವಿ. ಮೊದಲಾದವರು ಉಪಸ್ಥಿತರಿದ್ದು ಕಲಾವಿದರನ್ನು ಗೌರವಿಸಿದರು.