ಕಾಸರಗೋಡು: ಕುವೈತ್‍ನ ಮಂಗಾಫ್‍ನ ವಲಸೆ ಕಾರ್ಮಿಕರು ನೆಲೆಸಿದ್ದ ಕಟ್ಟಡದಲ್ಲಿ ಉಂಟಾಗಿರುವ ಅಗ್ನಿ ದುರಂತದಲ್ಲಿ ಮೃತಪಟ್ಟ ರಂಜಿತ್ ಕುಂಡಡ್ಕ ಅವರ ಮನೆಗೆ ಶಾಸಕ ಎನ್.ಎ ನೆಲ್ಲಿಕುನ್ನು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕುವೈತ್‍ನ ಬಹುಮಹಡಿ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿ ಆಕಸ್ಮಿಕದಲ್ಲಿ ಕೇರಳದ 14ಮಂದಿ ಮೃತಪಟ್ಟಿದ್ದು, ಇವರಲ್ಲಿ ಇಬ್ಬರು ಕಾಸರಗೋಡು ನಿವಾಸಿಗಳಾಗಿದ್ದಾರೆ. ರಂಜಿತ್ ಕುಂಡಡ್ಕ ಹಾಗೂ ತೃಕ್ಕರಿಪುರ ಇಳಂಬಚ್ಚಿಯಲ್ಲಿ ವಾಸಿಸುತ್ತಿರುವ ಪಿ. ಕುಞÂಕೇಳು ನಾಯರ್ ಕಾಸರಗೋಡು ನಿವಾಸಿಗಳಾಗಿದ್ದಾರೆ.
ಕೊಲ್ಲಂ ಜಿಲ್ಲೆಯ ಓಯೂರ್ ನಿವಾಸಿ ಉಮರುದ್ದೀನ್ ಶಮೀರ್(30), ಕೋಟ್ಟಾಯಂ ಪಾಂಬಾಡಿ ನಿವಾಸಿ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟ ನಿವಾಸಿ ಶಶಿಧರನ್ ನಾಯರ್(31), ಕೊಲ್ಲಂ ಪುನಲೂರಿನ ಸಾಜನ್ ಜಾರ್ಜ್(29), ಪತ್ತನಂತಿಟ್ಟ ಕೋಣಿ ನಿವಾಸಿ ಸಜು ವರ್ಗೀಸ್(56), ವಳ್ಳಿಕ್ಕೋಡ್ ಎಳಮಟ್ಟ ನಿವಾಸಿ ಪಿ.ವಿ ಮುರಳೀಧರನ್(68), ಕೊಲ್ಲಂ ವೆಳ್ಳಿಚ್ಚಾಲ್ ನಿವಾಸಿ ಲುಕೋಸ್ ಸಾಬು(48) ಹಾಗೂ ತಿರುವಲ್ಲ ನಿವಾಸಿ ಮೆಹ್ರಾನ್ ಥಾಮಸ್(37)ಎಂಬವರ ಗುರುತು ಪತ್ತೆಹಚ್ಚಲಾಗಿದೆ.
ಮೃತದೇಹಗಳು ಒಂದೆರಡು ದಿವಸಗಳಲ್ಲಿ ಊರಿಗೆ ತಲುಪಲಿದೆ. ದುರಂತದಲ್ಲಿ ಕೇರಳದ ಒಟ್ಟು 24ಮಂದಿ ಮೃತಪಟ್ಟಿದ್ದಾರೆ ಎಂದು ನೋಕಾ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಹಲವರ ಗುರುತು ಪತ್ತೆಕಾರ್ಯ ನಡೆದುಬರುತ್ತಿದೆ.