ಅಸ್ಸಾಂನ ಸಾಂಪ್ರದಾಯಿಕ ಉಡುಗೆಯಾದ ಮೇಖೇಲಾ ಚಾದರ್ ಧರಿಸಿ, ಹೊಸ ಶಿಕ್ಷಕಿಯೊಬ್ಬರು ಗುವಾಹಟಿಯ ಖಾಸಗಿ ಶಾಲೆಯಾದ ರಾಯಲ್ ಗ್ಲೋಬಲ್‍ಗೆ ಆಗಮಿಸಿದ್ದಾರೆ ... 'ಐರಿಸ್' ಎಂದು ಹೆಸರಿಸಲಾಗಿದೆ.
ಐರಿಸ್ ಈಶಾನ್ಯ ಭಾರತದಲ್ಲಿ ಮೊದಲ ಎಐ ಶಿಕ್ಷಕಿಯಾಗಿದ್ದಾರೆ.
ಎನ್.ಐ.ಟಿ.ಐ ಆಯೋಗ್ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಯೋಜನೆಯಡಿಯಲ್ಲಿ ಮೇಕರ್‍ಲ್ಯಾಬ್ಸ್ ಎಜು-ಟೆಕ್ ಸಹಯೋಗದೊಂದಿಗೆ ಐರಿಸ್ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಶಿಕ್ಷಣ ಕ್ಷೇತ್ರವನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಪರ್ಕಿಸುವಲ್ಲಿ ಐರಿಸ್ ಮಹತ್ವದ ಹೆಜ್ಜೆಯಾಗಿದೆ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದರು.
ಮೊದಮೊದಲು ಮಕ್ಕಳು ಐರಿಸ್‍ನನ್ನು ಕಂಡರೆ ಹೆದರುತ್ತಿದ್ದರು, ಆದರೆ ಅವರು ಮಕ್ಕಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದಾಗ ಕಥೆಯೇ ಬದಲಾಯಿತು. ನಂತರ, ಮಕ್ಕಳು ಐರಿಸ್ ಜೊತೆ ಸ್ನೇಹಿತರಾದರು. ಮಕ್ಕಳು ಮೊದಲು ಐರಿಸ್‍ಗೆ ಹಿಮೋಗ್ಲೋಬಿನ್ ಎಂದರೇನು ಎಂದು ಕೇಳಿದರು. ನಂತರ ಐರಿಸ್ ಮಕ್ಕಳಿಗೆ ಬಹಳ ಸ್ಪಷ್ಟವಾಗಿ ಮತ್ತು ವಿವರಣಾತ್ಮಕವಾಗಿ ಉತ್ತರಿಸಿದರು.
ಐರಿಸ್ ಪಠ್ಯಕ್ರಮದ ಮತ್ತು ಹೊರಗಿನ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಐರಿಸ್ ಮಕ್ಕಳಿಗೆ ಉದಾಹರಣೆಯ ಮೂಲಕ ಪಾಠಗಳನ್ನು ಕಲಿಸುತ್ತದೆ. ರೋಬೋಟ್‍ನಲ್ಲಿ ಧ್ವನಿ ನಿಯಂತ್ರಿತ ಸಹಾಯಕ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತದೆ.