ಕಾಸರಗೋಡು: ಸಾಮಾಜಿಕ ನ್ಯಾಯ ಇಲಾಖೆ ವತಿಯಿಂದ ಜಲ್ಲ ಪಂಚಾಯಿತಿಯ ಯಂಗ್ ಸೀನಿಯರ್ಸ್ ಫೌಂಡೇಶನ್ ಸಹಕಾರದೊಂದಿಗೆ ಹಿರಿಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಜಾಗೃತಿ ದಿನಾಚರಣೆ ಕಾಞಂಗಾಡು ನಗರಸಭಾಂಗಣದಲ್ಲಿ ನಡೆಯಿತು.
ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಸಮಾರಂಭ ಉದ್ಘಾಟಿಸಿ, ಸಥಳೀಯಾಡಳಿತ ಸಂಸ್ಥೆಗಳು ಹಾಗೂ ಅಂಗನವಾಡಿಗಳಿಗಿರುವ ಭಿತ್ತಿಪತ್ರ ಅನವರಣಗೊಳಿಸಿದರು. ಕಾಞಂಗಾಡು ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಯಂಗ್ ಸೀನಿಯರ್ಸ್ ಫೌಂಡೇಶನ್ ಸಂಸ್ಥಾಪಕ ಡಾ. ಮುಹಮ್ಮದ್ ಫಿಯಾಸ್, ಜಿಲ್ಲಾ ಹಿರಿಯರ ಪರಿಷತ್ ಸದಸ್ಯರಾದ ಎನ್.ಕುಞÂಕೃಷ್ಣನ್, ತಂಬಾನ್ ಮೇಲತ್, ಪಿ.ನಾರಾಯಣನ್, ಕೂತೂರ್ ಕಣ್ಣನ್, ವಿ.ಟಿ.ಕಾತ್ರ್ಯಾಯಿನಿ ಮತ್ತು ಪಿ.ಬಾಲಕೃಷ್ಣನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಘಟನೆಗಳ ಪ್ರತಿನಿಧಿಗಳು, ಕುಟುಂಬಶ್ರೀ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಯುವಕರು, ಪಾಲಿಯೇಟಿವ್ ಕ್ಯಾರ್ ಸ್ವಯಂಸೇವಕರು ಮತ್ತು ಯುವ ಹಿರಿಯ ಬ್ರಿಗೇಡ್ ಸ್ವಯಂಸೇವಕರು ಪಾಲ್ಗೊಂಡಿದ್ದರು.
ವಯಸ್ಸಾಗುವಿಕೆ, ಹಿರಿಯರ ನಿರೀಕ್ಷೆಗಳು ಮತ್ತು ವಯಸ್ಸಾದವರು ಎದುರಿಸುತ್ತಿರುವ ಸವಾಲುಗಳು, ಹಿರಿಯರ ಹಕ್ಕುಗಳು, ಸಾಮಾಜಿಕ ನ್ಯಾಯದ ಕುರಿತು ವೃತ್ತಿ ಮಾರ್ಗದರ್ಶನ ಇಲಾಖೆ - ಡಾ.ಮುಹಮ್ಮದ್ ಫಿಯಾಜ್, ವಕೀಲ ಎನ್.ಕೆ.ಮನೋಜ್ ಮತ್ತು ಜಬೀರ್ ಪಿ.ಪಿ ಅವರು ಹಿರಿಯರ ಕಲ್ಯಾಣ ಯೋಜನೆಗಳು, ಸೇವೆಗಳು ಮತ್ತು ಮೂಲಭೂತ ಜೀವನ ಬೆಂಬಲದ ಕುರಿತು ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಸ್ವಾಗತಿಸಿದರು. ಕಿರಿಯ ಅಧೀಕ್ಷಕ ಜಯೇಶ್ ಕುಮಾರ್ ಧನ್ಯವಾದಗೈದರು. ಕಾಸರಗೋಡು ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ಡೆಪ್ಯುಟಿ ಕಲೆಕ್ಟರ್ ಆರ್.ಆರ್.ಪಿ. ಶಾಜು ಪ್ರತಿಜ್ಞೆ ಬೋಧಿಸಿದರು. ಜಿಲ್ಲಾ ಕಾನೂನು ಅಧಿಕಾರಿ ಕೆ. ಮುಹಮ್ಮದ್‍ಕುಞÂ ಮಾತನಾಡಿದರು.