ನವದೆಹಲಿ: 'ದಿ ಹಿಂದೂ' ಪತ್ರಿಕೆಯಲ್ಲಿ ದೀರ್ಘಾವಧಿ ಕೆಲಸ ಮಾಡಿದ್ದ ಪತ್ರಕರ್ತ ಬಿ. ಮುರಳೀಧರ ರೆಡ್ಡಿ (64) ನಿಧನರಾದರು.
'ದಿ ಹಿಂದೂ' ಪತ್ರಿಕೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಪ್ರತಿನಿಧಿಯಾಗಿ ವರದಿಗಳನ್ನು ಮಾಡಿದ್ದ ಅವರು, ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಅನಾರೋಗ್ಯದಿಂದಾಗಿ ಮೃತಪಟ್ಟರು.
ಮೋಟರ್ ನ್ಯೂರಾನ್ ಕಾಯಿಲೆಯಿಂದ (ಎಂಎನ್‌ಡಿ) ಬಳಲುತ್ತಿದ್ದ ಮುರಳೀಧರ ರೆಡ್ಡಿ ಅವರು ಒಂದು ತಿಂಗಳಿನಿಂದ ಕೃತಕ ಉಸಿರಾಟದ ವ್ಯವಸ್ಥೆಯಿಂದಲೇ ಬದುಕಿದ್ದರು. ಎರಡು ವಾರಗಳ ಹಿಂದೆ ಹೃದಯಾಘಾತದ ನಂತರ ಅವರಿಗೆ ಪ್ರಜ್ಞೆ ತಪ್ಪಿತ್ತು.
ರಾಜಕೀಯ ವಿದ್ಯಮಾನಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ವರದಿಗಳನ್ನು ಬರೆದಿದ್ದರು.