ತಿರುವನಂತಪುರ: ಅಮ್ಮ ತೊಟ್ಟಿಲಿಗೆ ಹೊಸ ಅತಿಥಿಯೊಂದು ಲಭಿಸಿದೆ. 2.8 ಕೆಜಿ ತೂಕದ 10 ದಿನದ ಹೆಣ್ಣು ಮಗು ಪತ್ತೆಯಾಗಿದೆ.
ಮಳೆಯ ಮಧ್ಯೆ ಮಗು ಲಭಿಸಿರುವುದರಿಂದ ಮಗುವಿಗೆ ನೀಲಾ ಎಂದು ಹೆಸರಿರಿಸಲಾಗಿದೆ ಎಂದು ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಎಲ್. ಅರುಣ್ ಗೋಪಿ ಹೇಳಿದರು. ನಿನ್ನೆ ಮಧ್ಯಾಹ್ನದ ವೇಳೆಗೆ ಲಭಿಸಿದ್ದ ಎರಡನೇ ಹೆಣ್ಣು ಮಗು ಇದಾಗಿದ್ದು, ಶಿಶು ಆರೋಗ್ಯವಾಗಿದೆ.