ಕಾಸರಗೋಡು: ತ್ರಿಕರಿಪುರದ ಕುನ್ನಚ್ಚೇರಿ ಎಎಲ್‍ಪಿ ಶಾಲೆಯ ನೂತನ ಕಟ್ಟಡವನ್ನು ರಾಜ್ಯ ನೋಂದಣಿ, ಪುರಾತತ್ತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸಿದರು. ಶಾಸಕ ಎಂ. ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕುನ್ನಚ್ಚೇರಿ ಎಎಲ್ ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಟಿ. ವಿಲಾಸಿನಿ ವರದಿ ಮಂಡಿಸಿದರು. ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ ಮುಖ್ಯ ಅತಿಥಿಯಾಗಿದ್ದರು.
ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ನೀಲೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಟಿ.ಎಸ್.ನಜೀಬ್, ಸಿ. ಚಂದ್ರಮತಿ, ತೃಕರಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಕೆ.ಸುಜಾ, ಕೆ.ಎನ್.ವಿ.ಭಾರ್ಗವಿ, ಎಂ.ರಾಜೀವ್ ಬಾಬು, ಫೈಜ್ ಬಿರಿಚೇರಿ, ಚೆರುವತ್ತೂರು ಉಪಜಿಲ್ಲಾ ಎಇಒ ರಮೇಶ ಪುನ್ನತಿರಿಯಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ನ್ಯಾಯವಾದಿ ವಿಪಿಪಿ ಮುಸ್ತಫ, ನ್ಯಾಯವಾದಿ ಕೆ.ಕೆ.ರಾಜೇಂದ್ರನ್, ಇ.ಬಾಲಕೃಷ್ಣನ್, ಟಿ.ವಿ.ಶಿಬಿನ್, ವಿ.ವಿ.ಅಬ್ದುಲ್ಲ ಹಾಜಿ, ಎಂ.ಪಿ.ಬಿಜೀಶ್, ಸಿ.ಬಾಲನ್, ಟಿ.ವಿ.ವಿಜಯನ್ ಮಾಸ್ತರ್, ಶಾಲಾ ವ್ಯವಸ್ಥಾಪಕ ವಿ.ಕೆ.ಚಂದ್ರನ್, ಶಾಲಾ ಮಾಜಿ ಪ್ರಬಂಧಕ ಎಂ. ರಮೇಶಬಾಬು, ಕಟ್ಟಡ ಸಮಿತಿ ಅಧ್ಯಕ್ಷ ಕೆ.ಕೃಷ್ಣನ್, ಕೆ.ವಿ.ಮೋಹನನ್, ಟಿ.ಎಂ.ಅಮೀರ್, ತಂಕಯಂ ಎಂಎಎಂ ವಾಚನಾಲಯ ಅಧ್ಯಕ್ಷ ಪಿ.ರಾಜೇಶ್, ಶಾಲಾ ಮಾತೃ ಸಮಿತಿ ಅಧ್ಯಕ್ಷೆ ಕೆ.ವಿ.ಸೀನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇ. ಚಂದ್ರನ್ ಮಾತನಾಡಿದರು. ವಿದ್ಯಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ವಿ.ಕುಂಞÂ್ಞ ಕೃಷ್ಣನ್ ಸ್ವಾಗತಿಸಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿ. ಅನೀಶ್ ವಂದಿಸಿದರು.