ಪೆರ್ಲ : ದೇಶಾಭಿಮಾನಿ ಸಾರ್ವಜನಿಕ ಗ್ರಂಥಾಲಯ ಬೆದ್ರಂಪಳ್ಳ ಇದರ ವತಿಯಿಂದ ವಾರ್ಡ್ ವ್ಯಾಪ್ತಿಯಲ್ಲಿ ಎಸ್ಸಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬೆದ್ರಂಪಳ್ಳ ಎಯುಪಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕಾರ್ಯದರ್ಶಿ ಕಮಲಾಕ್ಷ ಉದ್ಘಾಟಿಸಿದರು.ಆನಂದ ಕುಕ್ಕಿಲ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಸುಧಾಕರ ಮಾಸ್ತರ್ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಮಾಸ್ತರ್, ಅವಿನಾಶ್ ಸಿ.ಎಚ್. ಉಪಸ್ಥಿತರಿದ್ದರು. ಲೈಬ್ರರಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿ ಗ್ರಂಥಪಾಲಕಿ ಚಿತ್ರಕಲಾ ಬಲ್ತಕಲ್ಲು ವಂದಿಸಿದರು.