ಪಾಲಕ್ಕಾಡ್: ಭೂಕಂಪದಿಂದಾಗಿ ಪಾಲಕ್ಕಾಡ್‍ನಲ್ಲಿ ಒಂದೇ ದಿನದಲ್ಲಿ ಬಾವಿಗಳು ಬತ್ತಿ ಹೋಗಿವೆ ಎಂದು ತಜ್ಞರ ತಂಡ ತಿಳಿಸಿದೆ. ಪೆರುಮಣ್ಣೂರು ಪೆÇನ್ನತ್ ಕಾಂಪೌಂಡ್‍ನಲ್ಲಿರುವ ಕುಂಜನ್ ಎಂಬುವವರ ಮನೆಯ ನೀರಿನ ಸಮೃದ್ಧ ಬಾವಿ ಒಂದೇ ದಿನದಲ್ಲಿ ಬತ್ತಿ ಹೋಗಿದೆ.
ಇದರ ಬೆನ್ನಿಗೇ ಸ್ಥಳಕ್ಕೆ ಅಂತರ್ಜಲ ಇಲಾಖೆಯ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಭೂಕಂಪವೇ ಬಾವಿಯ ನೀರು ಬತ್ತಲು ಕಾರಣ ಎಂಬುದು ಭೂ ಮತ್ತು ಜಲ ಇಲಾಖೆಯ ತಜ್ಞರ ತಂಡದಿಂದ ಬಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಬಾವಿಯೊಳಗೆ ತೋಡಿದ ಕೊಳವೆ ಬಾವಿಯಿಂದಾಗಿ ಭೂಕಂಪದ ಸಮಯದಲ್ಲಿ ಭೂಗತ ಬಂಡೆಗಳ ನಡುವೆ ಬಿರುಕುಗಳು ಉಂಟಾಗಿ ಈ ಬಿರುಕುಗಳ ಮೂಲಕ ನೀರು ಸಂಪೂರ್ಣವಾಗಿ ಸೋರಿಕೆಯಾಗುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.