ತಿರುವನಂತಪುರಂ: ರಾಜ್ಯದಲ್ಲಿ ವಾಂತಿ ಭೇದಿ ರೋಗ ಹರಡುತ್ತಿವೆ. ಆಹಾರ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಕುದಿಸದೆ ನೀರು ಕುಡಿಯದಿರುವುದು, ಹಳಸಿದ/ಹಾಳಾದ ಆಹಾರ ಸೇವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ತಿಂಗಳೊಂದರಲ್ಲೇ ಸುಮಾರು 4,000 ಜನರು ಅತಿಸಾರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳ ಅಂಕಿ-ಅಂಶಗಳನ್ನು ಸೇರಿಸಿದರೆ ಇದಕ್ಕಿಂತ ಹೆಚ್ಚು ಎಂಬ ತೀರ್ಮಾನಕ್ಕೆ ಬರಲಾಗಿದೆ. ವಾಂತಿ ಮತ್ತು ಭೇದಿ ಹೆಚ್ಚಾಗಿ ಸಂಸ್ಕರಿಸದ ನೀರಿನಿಂದ ಹರಡುತ್ತದೆ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ಶುದ್ಧ ನೀರು ಪೂರೈಸುವ ಪೈಪುಗಳಲ್ಲಿ ಬಳಸುವ ನೀರಾದರೂ ಅದನ್ನು ಕುದಿಸದೆ ಕುಡಿಯಬೇಡಿ ಹಾಗೂ ಆದಷ್ಟು ಹೊರಗಿನಿಂದ ಆಹಾರ ಖರೀದಿಸುವುದನ್ನು ತಪ್ಪಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.