ರಾಂಚಿ: ಸಸಾರಾಮ್-ರಾಂಚಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಹಬ್ಬಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿ, ಮೂವರು ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿ ಇನ್ನೊಂದು ರೈಲಿನಡಿಗೆ ಸಿಲುಕಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಜಾರ್ಖಂಡ್‌ನ ಕುಮಾನ್ ನಿಲ್ದಾಣದ ಬಳಿ ಸಂಭವಿಸಿದೆ.
ರಾತ್ರಿಯನ್ನು ಕಳೆಯಲು ಪ್ರಯಾಣಿಕರು ಸಜ್ಜಾಗುತ್ತಿದ್ದಾಗ ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಗೊಂದಲವನ್ನು ಸೃಷ್ಟಿಸಿತ್ತು. ಗಾಬರಿಗೊಂಡಿದ್ದ ಹಲವು ಪ್ರಯಾಣಿಕರು ರೈಲಿನಿಂದ ಹೊರಕ್ಕೆ ಹಾರಿದಾಗ ಅವರಿಗೆ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಸರಕು ಸಾಗಣೆ ರೈಲು ಢಿಕ್ಕಿ ಹೊಡೆದಿತ್ತು. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.