ಬದಿಯಡ್ಕ: ಕುಂಬ್ಡಾಜೆ ಬಂಟರ ಸಂಘದ ನೇತೃತ್ವದಲ್ಲಿ ಜುಲೈ 7 ರಂದು ನಡೆಯುವ ಸಾರ್ವಜನಿಕ ಕೆಸರು ಗದ್ದೆ ಕ್ರೀಡಾಕೂಟ "ಕುಂಬ್ಡಾಜೆ ಗ್ರಾಮೋತ್ಸವ" ದ ಆಮಂತ್ರಣ ಪತ್ರಿಕೆ ಬಿಡುಗಡೆ ನಿನ್ನೆ ಮಾರ್ಪನಡ್ಕ ಪಾಂಚಜನ್ಯ ಸಾಂಸ್ಕøತಿಕ ಸಭಾ ಭವನದಲ್ಲಿ ಜರಗಿತು.
ಕುಂಬ್ಡಾಜೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೋಕ್ತೇಸರ ಶ್ಯಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಗೋಪಾಕೃಷ್ಣ ಭಜನಾಮಂದಿರದ ಅಧ್ಯಕ್ಷÀ ಬಾಬು ಮಾಸ್ತರ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಹರೀಶ್ ನಾರಂಪಾಡಿ, ಗಂಗಾದರ ರೈ ಮಠದಮೂಲೆ, ಚಿದಾನಂದ ರೈ, ಯಶೋದ, ಸುನಿತಾ ರೈ, ರಮೇಶ್ ಕೃಷ್ಣ ಪದ್ಮಾರು,ಗೋಪಾಲಕೃಷ್ಣ, ರೋಶಿಣಿ, ರಾಮಣ್ಣ ರೈ , ಬಾಲಕೃಷ್ಣ ಕೆ.ಕೆ, ಜಯರಾಜ್ ಕುಣಿಕುಳ್ಳಾಯ ಉಪಸ್ಥಿತರಿದ್ದರು.
ಅಮೃತ್ ರಾಜ್ ರೈ ಸ್ವಾಗತಿಸಿ, ನವೀನ್ ರೈ ಪುತ್ರಕಳ ವಂದಿಸಿದರು. ಹರ್ಷಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.