ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸಧಿನ್ನಿಯ ಪರಿಸರದಲ್ಲಿ ಬಿಲ್ವಪತ್ರೆಗಿಡವನ್ನು ನೆಡುವ ಮೂಲಕ ಪರಿಸರದಿನಾಚರಣೆಯನ್ನು ಆಚರಿಸಲಾಯಿತು. ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮನಾಯ್ಕ ಕುಂಟಾಲುಮೂಲೆ, ಸತೀಶ್ ಕುಲಾಲ್ ಕುಂಟಾಲುಮೂಲೆ ಉಪಸ್ಥಿತರಿದ್ದರು. ಮೂಲಸ್ಥಾನದ ನವೀಕರಣದ ಸಂದರ್ಭದಲ್ಲಿ ವಿವಿಧ ವರ್ಗಗಳ ಔಷಧೀಯ ಗಿಡಗಳನ್ನು, ಫಲವೃಕ್ಷಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಶ್ರೀ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ತಿಳಿಸಿದ್ದಾರೆ.