ಕಾಸರಗೋಡು: ಕೇರಳ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಾಸರಗೋಡು ಜಿಲ್ಲಾ ಕಛೇರಿ ಸದಸ್ಯರಾಗಿರುವ 2024-25 ನೇ ಶೈಕ್ಷಣಿಕ ವರ್ಷದಲ್ಲಿ ಎಲ್.ಕೆ.ಜಿ, ಒಂದನೇ ತರಗತಿಗೆ ದಾಖಲಾತಿ ಪಡೆದ ಮಕ್ಕಳಿಗೆ ಕಲಿಕಾ ಉಪಕರಣಗಳನ್ನು ಖರೀದಿಸಲು ವಿಶೇಷ ಧನಸಹಾಯವನ್ನು ನೀಡಲಾಗುತ್ತದೆ.
ಅರ್ಹರಾಗಿರುವ ಜಿಲ್ಲೆಯ ಸದಸ್ಯರು ಬಿಳಿ ಹಾಳೆಯಲ್ಲಿ ತಯಾರಿಸಿದ ಅರ್ಜಿ, ದಾಖಲಾತಿ ಲಭಿಸಿದ ಶಾಲೆಯಿಂದ ಪಡೆದ ಸಾಕ್ಷ್ಯಪತ್ರ, ಕ್ಷೇಮ ನಿಧಿ ಸದಸ್ಯತನ ಕಾರ್ಡ್, ಇದುವರೆಗೆ ಕ್ಷೇಮ ನಿಧಿಗೆ ಕಂತುಗಳನ್ನು ಪಾವತಿಸಿದ ರಸೀದಿ, ಆಧಾರ್ ಕಾರ್ಡ್, ಸದಸ್ಯರ ಬ್ಯಾಂಕ್ ಪಾಸ್ ಪುಸ್ತಕ ಎಂಬಿವುಗಳ ಕ್ಸೆರಾಕ್ಸ್ ಪ್ರತಿಯನ್ನು ಜೂನ್ 10 ರ ಮೊದಲು ಕೇರಳ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಕಣ್ಣೂರು ಜಿಲ್ಲಾ ಕಛೇರಿಗೆ ತಲಪಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0497 2970272)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.