ಮಂಜೇಶ್ವರ: ತೀವ್ರವಾದ ಮಳೆ ಹಾಗೂ ಗಾಳಿಯಿಂದಾಗಿ ಹಲವೆಡೆ ಮರಗಳು ಧರಾಶಾಯಿಯಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಂದ್ಯೋಡ್ ಬಿ.ಸಿ. ರೋಡ್ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಗೊಳಗಾಯಿತು.
ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೊಸಂಗಡಿ ರೈಲು ಹಳಿಯ ಸಮೀಪ ಮರ ಬಿದ್ದಿದೆ. ಹೊಸಂಗಡಿ ಪಿರಾರಮೂಲೆಯಲ್ಲಿ ಮರ ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಂಗಡಿ ಪದವಿನಲ್ಲಿ ದೈತ್ಯಾಕಾರದ ಮರವೊಂದು ಅಂಗಡಿ ಮೇಲೆ ಬಿದ್ದು ಭಾರೀ ನಷ್ಟ ಉಂಟಾಗಿದೆ.
ಕುಂಬಳೆ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ಫ್ರೆಂಡ್ಸ್ ಆಟೋಮೊಬೈಲ್ ಅಂಗಡಿಯ ಸಮೀಪ ತೆಂಗಿನ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇಲ್ಲಿಯೂ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಬದಿಯಡ್ಕ-ಚೆರ್ಕಳ ರಸ್ತೆಯ ಬೀಜಂತಡ್ಕ ಮಾಯಿಲಂಕೋಟೆ ತಿರುವಿನಲ್ಲಿ ರಸ್ತೆ ಬದಿಯ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಅರ್ಧಗಂಟೆ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರ ಸಹಾಯದಿಂದ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.