HEALTH TIPS

ಪೊದೆಗಳಲ್ಲಿ ಬೆಳೆಯುವ ಈ ಗಿಡ ಅನೇಕ ರೋಗಗಳಿಗೆ ರಾಮಬಾಣ.! ಇಲ್ಲಿದೆ ಇದರ ಉಪಯೋಗ

 ಕ್ಕದ ಗಿಡದ (Calotropis)ಹಾಲು ಕಣ್ಣಿಗೆ ಸಿಡಿಯಬಾರದು. ಸಿಡಿದರೆ ಕಣ್ಣು ಕುರುಡಾಗುವ ಅಪಾಯವಿರುತ್ತದೆ. ಹೀಗಾಗಿ ಬಳಕೆಯ ವೇಳೆ ಜಾಗೃತರಾಗಿರಿ. ಚಿಕ್ಕಮಕ್ಕಳ ಕೈಗಂತೂ ಸಿಗದಿದ್ದರೇನೆ ಒಳಿತು. ಎಕ್ಕದ ಗಿಡದಿಂದ ಎಷ್ಟು ಆರೋಗ್ಯಕ್ಕೆ ಒಳ್ಳೆಯ ಗುಣವಿದೆಯೋ ಅಷ್ಟೇ ಅಪಾಯ ಕೂಡ ಇದೆ ಎನ್ನಬಹುದು.

ಹಾಗಾದರೆ ಎಕ್ಕದ ಗಿಡ ಯಾವೆಲ್ಲಾ ರೀತಿಯ ಆರೋಗ್ಯ ಸಮಸ್ಯಗಳಿಗೆ ಪರಿಹಾರ ನೀಡಬಲ್ಲದು ಎನ್ನುವುದನ್ನು ತಿಳಿದುಕೊಳ್ಳಿ.

ಮಂಡಿ ನೋವಿಗೂ ಪರಿಹಾರ

ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕೊರತೆಯಾಗುತ್ತದೆ. ಇದರಿಂದ ಕುಳಿತರೂ, ನಿಂತರೂ ನೋವು ಕಾಡಲಾರಂಭಿಸುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಮಂಡಿನೋವು ಇರುವವರು ಎಕ್ಕದ ಎಲೆಯನ್ನು ಸುಟ್ಟು ಬಿಸಿ ಇರುವಾಗಲೇ ಅದನ್ನು ನೋವಿರುವ ಜಾಗದಲ್ಲಿ ಇರಿಸಿಕೊಂಡು ಬಟ್ಟೆಯನ್ನು ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಈ ರಿತಿ ಮಾಡಿದರೆ ಉತ್ತ ಫಲಿತಾಂಶ ಕಂಡುಕೊಳ್ಳಬಹುದಾಗಿದೆ.

​ಅಸ್ತಮಾಕ್ಕೂ ಇದು ಮದ್ದು

ಎಕ್ಕದ ಗಿಡ ವಿಷವಾದರೂ ಸರಿಯಾಗಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಒಳಿತಾಗುವ ಹಲವು ಗುಣಗಳನ್ನು ಒಳಗೊಂಡಿದೆ. ಎಕ್ಕದ ಗಿಡದ ಹೂವನ್ನು ಒಣಗಿಸಿ ಪುಡಿ ಮಾಡಿ ಚೂರ್ಣದಂತೆ ಮಾಡಿಟ್ಟುಕೊಂಡರೆ ಅಸ್ತಮಾ ರೋಗಿಗಳಿಗೆ ಉತ್ತಮ ಔಷಧವಾಗಿದೆ. ಪ್ರತಿದಿನ ಈ ಚೂರ್ಣದ ಸೇವನೆಯನ್ನು ಮಾಡುತ್ತಿದ್ದರೆ ಅಸ್ತಮಾ, ದುರ್ಬಲತೆ, ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತದೆ. ದಮ್ಮು ರೋಗವಿರುವವರು ಕೂಡ ಈ ಚೂರ್ಣವನ್ನು ಸೇವನೆ ಮಾಡುವುದರಿಂದ ಶ್ವಾಸಕೋಶದಲ್ಲಿ ಹಿಡಿತವಾಗುವ ಅನುಭವ ಸರಿಹೋಗುತ್ತದೆ.

​ಶರೀರದ ಊತ ನಿವಾರಣೆಗೆ ಸಹಕಾರಿ

ಪ್ರಾಚೀನ ಕಾಲದಿಂದಲೂ ಎಕ್ಕದ ಗಿಡವನ್ನು ಔಷಧೀಯ ಗಿಡವಾಗಿ ಬಳಸುತ್ತಿದ್ದಾರೆ. ಕಾಲು ಅಥವಾ ಇತರ ದೇಹದ ಮೇಲಾಗುವ ಊತವನ್ನು ಕಡಿಮೆ ಮಾಡಲು ಎಕ್ಕದ ಎಲೆ ಸಹಕಾರಿಯಾಗಿದೆ. ಎಕ್ಕದ ಎಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಊತವಿರುವ ಜಾಗದಲ್ಲಿ ಇಡಬೇಕು. ಒಂದು ವಾರಗಳ ಕಾಲ ಹೀಗೆ ಮಾಡುವುದಿರಿಂದ ಕಾಲಿನ ಊತ ಕಡಿಮೆಯಾಗುತ್ತದೆ. ಶರೀರದ ಮೇಲೆ ಗಾಯಗಳಾದರೆ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ನೋವು ಕೂಡ ಬೇಗನೆ ವಾಸಿಯಾಗುತ್ತದೆ.

​ನಂಜು ನಿವಾರಕವಾಗಿದೆ

ಎಕ್ಕದ ಗಿಡದ ಎಲೆಯ ತುದಿಯಲ್ಲಿ ಬರುವ ಬಿಳಿಯ ಬಣ್ಣದ ಹಾಲನ್ನು ನಂಜಿನ ಈಟಗಲು ಕಚ್ಚಿರುವ ಜಾಗದಲ್ಲಿ ಹಚ್ಚದರೆ ದೇಹಕ್ಕೆ ನಂಜು ಅಂಟುವುದಿಲ್ಲ. ಅಲ್ಲದೆ ಮುಳ್ಳು ಚುಚ್ಚಿದ್ದರೆ ಈ ಹಾಲನ್ನು ಮುಳ್ಳು ಚುಚ್ಚಿದ ಜಾಗದಲ್ಲಿ ಹಾಕಿದರೆ ಮುಳ್ಳು ಹೊರಗೆ ಬರುತ್ತದೆ. ಚೇಳು ಕಚ್ಚಿದ್ದರೆ ಆ ಜಾಗಕ್ಕೆ ಎಕ್ಕದ ಗಿಡದ ಹಾಲನ್ನು ಹಾಕಿದರೆ ನೋವು ಬೇಗನೆ ಕಡಿಮೆಯಾಗುತ್ತದೆ. ವಿಷ ಕೂಡ ದೇಹಕ್ಕೆ ಹೋಗದಂತೆ ತಡೆಯುತ್ತದೆ.

​ಮಧುಮೇಹ ನಿಯಂತ್ರಣಕ್ಕೂ ಸಹಕಾರಿ

ಇತ್ತೀಚೆಗಂತೂ ಮಧುಮೇಹ ಎಲ್ಲರಲ್ಲೂ ಇರುವ ಸಾಮಾನ್ಯ ಕಾಯಿಲೆಯಂತಾಗಿದೆ. ಮಧುಮೇಹಕ್ಕೆ ಸಾಕಷ್ಟು ಔಷಧಗಳಿದ್ದರೂ ಮೂಲಿಕೆಗಳ ಔಷಧ ಹೆಚ್ಚು ಪರಿಣಾಮಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೆ ಎಕ್ಕದ ಎಲೆ ಸಹಕಾರಿಯಾಗಿದೆ. ಹೌದು, ಎಕ್ಕದ ಎಲೆಗಳನ್ನು ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಪಾದದ ಕೆಳಗೆ ಇಟ್ಟು ಬಟ್ಟೆ ಸುತ್ತಿಕೊಂಡು ಮಲಗಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಜೀರ್ಣಕ್ರಿಯೆಗೆಸಹಾಯಕ:

ಎಕ್ಕದ ಗಿಡದ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಎಕ್ಕದ ಗಿಡದ ಎಲೆಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಉಬ್ಬಸಕ್ಕೆಪರಿಹಾರ:

ಉಬ್ಬಸಕ್ಕೂ ಕೂಡ ಎಕ್ಕದ ಗಿಡದಲ್ಲಿ ಮದ್ದಿದೆ. ಎಕ್ಕದ ಗಿಡದಿಂದ ಕೆಲವು ಒಣಗಿದ ಹೂವುಗಳನ್ನು ತೆಗೆದುಕೊಂಡು ಪುಡಿ ಮಾಡಿ, ನಂತರ ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಸೇರಿಸಿ. ಅದಾದ ಬಳಿಕ ಈ ಮಿಶ್ರಣವನ್ನು ಪುಡಿಯ ರೂಪದಲ್ಲಿ ಅಥವಾ ಬೆಚ್ಚಗಿನ ನೀರಿನಿಂದ ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬಸ ಕಡಿಮೆ ಆಗುವುದರ ಜೊತೆ ಆಸ್ತಮಾ, ಕೆಮ್ಮು, ಶೀತ ಮತ್ತು ಇತರ ಅನೇಕ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries