ತಿರುವನಂತಪುರಂ: ಬೇಸಿಗೆ ರಜೆಯ ನಂತರ ಇಂದು ರಾಜ್ಯದಾದ್ಯಂತ ಉತ್ಸಾಹ-ಸಂಭ್ರಮಗಳೊಂದಿಗೆ ಶಾಲೆಗಳು ಆರಂಭಗೊಂಡಿತು. ಸುಮಾರು ಮೂರು ಲಕ್ಷ ಹೊಸಬರು ಒಂದನೇ ತರಗತಿಗೆ ತಲುಪುವ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ಹೊಂದಿದೆ.
ಆದರೆ ಅಂಕಿ ಅಂಶಗಳ ಪ್ರಕಾರ ಕೇರಳ ಪಠ್ಯಕ್ರಮದ ಬಗ್ಗೆ ಆಸಕ್ತಿ ಕಡಮೆಯಾಗುತ್ತಿದೆ. ಇದುವರೆಗೆ 2.44 ಲಕ್ಷ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ 53,421 ಮಂದಿ ಕಡಮೆ ಇದ್ದಾರೆ. ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಕಡಮೆಯಾಗಿದ್ದಾರೆ.
ಹೊಸ ಶೈಕ್ಷಣಿಕ ವರ್ಷ ಬದಲಾವಣೆಗಳಲ್ಲೊಂದಾಗಲಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ. ಒಂದರಿಂದ ಒಂಬತ್ತರವರೆಗೆ ಎಲ್ಲರೂ ಪಾಸ್ ಮಾಡುವ ವಿಧಾನವನ್ನು ಈ ವರ್ಷದಿಂದ ರದ್ದುಪಡಿಸಲಾಗುತ್ತಿದ್ದು, 10ನೇ ತರಗತಿಯಲ್ಲಿ ಎಲ್ಲ ವಿಷಯಗಳಲ್ಲಿ ತೇರ್ಗಡೆಗೊಳ್ಳಲು ಕನಿಷ್ಠ ಅಂಕಗಳಿಸಬೇಕೆಂಬ ನಿರ್ಧಾರವನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. 1, 3, 5, 7 ಮತ್ತು 9ನೇ ತರಗತಿಗಳ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ಇನ್ನು ಮುಂದೆ ಶೇಕಡಾ 100 ರ ಸಮೀಪದಲ್ಲಿ ಉತ್ತೀರ್ಣತೆ ಇರುವುದಿಲ್ಲ ಮತ್ತು ಪ್ರತಿ ಪಠ್ಯಗಲಲ್ಲೂ ಕನಿಷ್ಠ ಅಂಕಗಳನ್ನು ಮರಳಿ ತರಲಾಗುವುದು ಎಂದು ಸಚಿವರು ಪ್ರಸ್ತಾಪಿಸಿದರು.