ಬದಿಯಡ್ಕ: ಬಿದ್ದು ಸಿಕ್ಕಿದ ಬ್ಯಾಗ್ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬದಿಯಡ್ಕ ವಿದ್ಯಾಗಿರಿ ಕಡಾರ್ ನಿವಾಸಿ ಹಾಗೂ ಬದಿಯಡ್ಕ ಮೇಲಿನ ಪೇಟೆಯಲ್ಲಿ ವಾಹನ ಇನ್ಸೂರೆನ್ಸ್ ಸಂಸ್ಥೆ ನಡೆಸುತ್ತಿರುವ ಹಾಗೂ ಟಿ.ವಿ.ಎಸ್ ಶೋರೂಂ ಮಾಲಕರಾಗಿರುವ ರಮೇಶ್ ಆಳ್ವ ಮಾದರಿಯಾಗಿದ್ದಾರೆ.
ಕಾಸರಗೋಡು ಆರ್.ಟಿ.ಒ.ಕಚೇರಿ ಸನಿಹ ನಗದು, ಬೆಲೆಬಾಳುವ ವಸ್ತು ಹೊಂದಿದ್ದ ಬ್ಯಾಗ್ ಬಿದ್ದು ಸಿಕ್ಕಿತ್ತು. ಬ್ಯಾಗಿನಲ್ಲಿ 10 ಸಾವಿರ ರೂ. ನಗದು, 1 ಲಕ್ಷ ರೂ ಬೆಲೆಬಾಳುವ ಐ.ಫೆÇೀನ್ ಹಾಗೂ ದಾಖಲೆ ಹೊಂದಿತ್ತು. ತಳಂಗರೆ ನಿವಾಸಿ ಹಾರೀಸ್ ಎಂಬವರ ಪತ್ನಿಯ ಬ್ಯಾಗ್ ಇದಾಗಿತ್ತು. ಬ್ಯಾಗಿನಲ್ಲಿದ್ದ ದಾಖಲೆ ಮೂಲಕ ವಾರಸುದಾರರನ್ನು ಪತ್ತೆ ಹಚ್ಚಿ ಆರ್.ಟಿ.ಒ.ಕಚೇರಿ ಬಳಿ ಬ್ಯಾಗ್ ಹಸ್ತಾಂತರಿಸಲಾಯಿತು.