ಕಾಸರಗೋಡು : ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀವೆಂಕಟ್ರಮಣ ಬಾಲಗೋಕುಲದ 'ಕುಟುಂಬ ಸಂಗಮ'ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಂಗವಾಗಿ ಬಾಲಗೋಕುಲದ ಮಕ್ಕಳಿಗೆ ಮತ್ತು ಹಿರಿಯರಿಗೆ ರಾಮಾಯಣ ಮತ್ತುಮಹಾಭಾರತದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಹಾಗೂ ವಿವಿಧ ಆಟೋಟಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ನಿವೃತ್ತ ಮುಖ್ಯೋಪಧ್ಯಾಯ ಗುರುಮೂರ್ತಿ ನಾಯ್ಕಾಪು ಹಾಗೂ ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಾಲಗೋಕುಲ ಅಧ್ಯಾಪಿಕೆ ಹಾಗೂ ನಗರಸಭಾ ಸದಸ್ಯೆ ಶ್ರೀಲತಾಟೀಚರ್ ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳಿಗೆ, ಎಲ್.ಕೆ.ಜಿ ಯಿಂದಕಾಲೇಜ್ ಕಲಿಯುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಮ್ಯಾ,ಆಶಿಕಾ, ಅಥಿತಿ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಕಿಶೋರ್ ಕುಮಾರ್ ವಂದಿಸಿದರು ಶಾಂತಿ ಮಂತ್ರದೊAದಿಗೆ ಕಾರ್ಯಕ್ರಮ ಸಂಪನ್ನಗೊAಡಿತು.