ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಬಾನಂ ಸರ್ಕಾರಿ ಪ್ರೌಢಶಾಲೆಯ ಮಾದಕ ವಸ್ತು ವಿರೋಧಿ ಕ್ಲಬ್ ನೇತೃತ್ವದಲ್ಲಿ ಮಾದಕ ವಸ್ತು ವಿರೋಧಿ ಫ್ಲ್ಯಾಶ್ ಮಾಬ್ ಆಯೋಜಿಸಲಾಗಿತ್ತು.
ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ, ಅಣಕು ಸಂಸತ್ತು, ಮಾದಕದ್ರವ್ಯ ವಿರುದ್ಧದ ಭಿತ್ತಿಪತ್ರ ಪ್ರದರ್ಶನ, ಡಿಜಿಟಲ್ ಪೆÇೀಸ್ಟರ್ ಪ್ರದರ್ಶನ ನಡೆಯಿತು. ಮುಖ್ಯ ಶಿಕ್ಷಕಿ ಸಿ.ಕೋಮಲವಳ್ಳಿ ಸಮಾರಂಭ ಉದ್ಘಾಟಿಸಿದರು. ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಕೆ.ಭಾಗ್ಯೇಶ್, ಅನೂಪ್ ಪೆರಿಯಾಲ್, ಎಂ.ಲತಾ, ಪಿ.ವಿ.ವಿಜೇಶ್, ಕೆ.ಆರ್.ಸುಮತಿ ನೇತೃತ್ವ ವಹಿಸಿದ್ದರು.