ಕಾಸರಗೋಡು: ಕಾಞಂಗಾಡು ನಗರಸಭಾ ಮಟ್ಟದ ಶಾಲಾ ಪ್ರವೇಶೋತ್ಸವದ ಉದ್ಘಾಟನೆಯು ಪುಂಜಾವಿ ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ನವಾಗತರಿಗೆ ಅಧ್ಯಯನ ಸಾಮಗ್ರಿಗಳನ್ನು ವಿತರಿಸುವುದರ ಜತೆಗೆ ಪೆÇೀಷಕರಿಗಾಗಿ ಜಾಗೃತಿ ತರಗತಿ ನಡೆಸಲಾಯಿತು.
ಮುಚ್ಚಿಲೋಟ್ ಸರ್ಕಾರಿ ಎಲ್.ಪಿ. ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವ ಆಚರಿಸಲಾಯಿತು. ನವಾಗತರನ್ನು ಶಾಲೆಯ ಆವರಣ ಗೇಟ್‍ನಿಂದ ಭಿತ್ತಿಪತ್ರ, ಹಾರ ಮತ್ತು ಬಲೂನ್‍ನೊಂದಿಗೆ ಬರಮಾಡಿಕೊಂಡು ತರಗತಿಯೊಳಗೆ ಕರೆತರಲಾಯಿತು.
ವಿವಿಧ ಕ್ಲಬ್‍ಗಳು, ವ್ಯಕ್ತಿಗಳು, ಸಂಸ್ಥೆಗಳ ವತಿಯಿಂದ ವಿದ್ಯರ್ಥಿಗಳಿಗೆ ಗಿಫ್ಟ್ ಪ್ಯಾಕ್, ಬ್ಯಾಗ್, ಅಂಬ್ರೆಲಾ, ಕಿಟ್, ನೋಟ್‍ಬುಕ್, ಮಕ್ಕಳಿಗಾಗಿ ಸಿಹಿತಿಂಡಿ ವಿತರಿಸಲಾಯಿತು. ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ತರಗತಿ ನಡೆಸಲಾಯಿತು. ಮುಖ್ಯ ಶಿಕ್ಷಕಿ ಅನಿತಾ ಸ್ವಾಗತಿಸಿದರು. ಹಿರಿಯ ಸಹಾಯಕಿ ಸುಮಂಗಲಾ ವಂದಿಸಿದರು.
ಮೇಲಂಗೋಟ್ ಎ.ಸಿ ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಶಾಲೆಯಲ್ಲಿ ನಡೆದ ಪ್ರವೇಶೋತ್ಸವ ಸಮಾರಂಭವನ್ನು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಅಪ್ಪುಕುಟ್ಟನ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಿ.ಜಯನ್ ಅಧ್ಯಕ್ಷತೆ ವಹಿಸಿದ್ದರು. ಎಂ ರಾಘವನ್ ಮತ್ತು ಕೆ ಪ್ರಸೇನ ಮಾತನಾಡಿದರು. ಶಾಲೆಯ ಎಚ್‍ಎಂಕೆ.ಅನಿಲ್ ಸ್ವಾಗತಿಸಿದರು. ವಿವಿಧ ಕ್ಲಬ್‍ಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ವತಿಯಿಂದ ಮಕ್ಕಳಿಗೆ ವಿವಿಧ ಅಧ್ಯಯನ ಸಾಮಗ್ರಿ ವಿತರಿಸಲಾಯಿತು.
ಕಾಞಂಗಾಡು ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಪ್ರಬಂಧಕ ವೇಣುಗೋಪಾಲನ್ ನಂಬಿಯಾರ್ ಅವರು ವೆಳುತಚ್ಚನ್ ಅವರ ಶಿಲಾಪ್ರತಿಮೆ ಎದುರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಸಂಚಾಲಕ ವೇಣುನಾಥನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಎಂ.ಅಶೋಕ್ ಕುಮಾರ್, ಸತ್ಯನ್ ಪೂಚಕಾಡ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ವಿನೋದಕುಮಾರ್ ಸ್ವಾಗತಿಸಿದರು.