ಮಂಜೇಶ್ವರ: ಕುಂಜತ್ತೂರು ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ 2024-25ನೇ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳು, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ, ವಾಚನಾಮಾಸಾಚರಣೆ ಉದ್ಘಾಟನೆ ಶಾಲಾ ಸಭಾಂಗಣದಲ್ಲಿ ಜರುಗಿತು.
ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಗಾಯಕ, ಜಾದುಗಾರ ಕುಞÂಕೃಷ್ಣನ್ ಅವರು ಜಾನಪದ ಹಾಡುಗಳ ಗಾಯನ ಹಾಗೂ ಜಾದೂ ಪ್ರದರ್ಶನದ ಮೂಲಕ ನೆರವೇರಿಸಿದರು. ಈ ಸಂದರ್ಭ ವಿವಿಧ ಕ್ಲಬ್ ಗಳ ವತಿಯಿಂದ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಜಿ ಅಧ್ಯಕ್ಷತೆ ವಹಿಸಿದ್ದರು. ವಿ.ಎಚ್.ಎಸ್.ಸಿ.ಪ್ರಾಚಾರ್ಯ ಶಿಶುಪಾಲನ್, ಪಿಟಿಎ ಸದಸ್ಯ ಕರೀಂ ಇಬ್ರಾಹಿಂ, ಹಿರಿಯ ಶಿಕ್ಷಕರಾದ ರಾಣಿ ವಾಸುದೇವನ್, ಅನಿತಾ ಪಿ ಜಿ, ಶ್ರೀ ರವೀಂದ್ರ ರೈ ಕೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ದಿವಾಕರ ಬಲ್ಲಾಳ ಎ.ಬಿ ಸ್ವಾಗತಿಸಿದರು. ಅಶ್ರಫ್ ಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕವಿತಾ ಕೆ ವಂದಿಸಿದರು.