ತಿರುವನಂತಪುರ: ರೇಬಿಸ್ ಸೊಂಕಿನಿಂದ ಮಕ್ಕಳನ್ನು ರಕ್ಷಿಸಲು ಕೇರಳ ಸರ್ಕಾರ ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರೇಬಿಸ್ ರೋಗ: ಶಾಲೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇರಳ ಸರ್ಕಾರ
0
ಜೂನ್ 08, 2024
Tags
ತಿರುವನಂತಪುರ: ರೇಬಿಸ್ ಸೊಂಕಿನಿಂದ ಮಕ್ಕಳನ್ನು ರಕ್ಷಿಸಲು ಕೇರಳ ಸರ್ಕಾರ ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೀದಿ ನಾಯಿಗಳು ಶಾಲೆಯ ಆವರಣದಲ್ಲಿ ಉಳಿದುಕೊಂಡು ಸಂತಾನೋತ್ಪತ್ತಿ ಮಾಡುವುದನ್ನು ತಡೆಯಬೇಕು. ಜತೆಗೆ ಮಕ್ಕಳು ಪ್ರಾಣಿಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು.
ಯಾವುದೇ ಮಕ್ಕಳಿಗೆ ನಾಯಿ ಪರಚಿದಲ್ಲಿ ಅಥವಾ ಕಚ್ಚಿದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಬೇಕು. ಇದರ ಜತೆಗೆ ಶಾಲೆಗಳಲ್ಲಿ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ರೇಬಿಸ್ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.