HEALTH TIPS

ಉತ್ತರಾಖಂಡ: ಸಾಹಸಿ ಚಾರಣದ ದೃಷ್ಟಿಕೋನ ಬದಲು ಅಗತ್ಯ

           ಡೆಹ್ರಾಡೂನ್: ಉತ್ತರಾಖಂಡ ಉತ್ತರಕಾಶಿಯ ಸಹಸ್ತ್ರ ಸರೋವರಕ್ಕೆ ಚಾರಣ ಹೋಗಿದ್ದ ಬೆಂಗಳೂರಿನ 22 ಸದಸ್ಯರ ಪೈಕಿ 9 ಮಂದಿ ಮೃತಪಟ್ಟಿರುವ ಬೆನ್ನಲ್ಲೇ, ರಾಜ್ಯದಲ್ಲಿ ಸಾಹಸಮಯ ಪ್ರವಾಸೋದ್ಯಮದ ಕುರಿತ ದೃಷ್ಟಿಕೋನ ಬದಲಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನೂಪ್ ನೌಟಿಯಾಲ್ ಅಭಿಪ್ರಾಯಪಟ್ಟಿದ್ದಾರೆ.

          ಉತ್ತರಾಖಂಡದಲ್ಲಿ ಚಾರಣ ಕೈಗೊಂಡಾಗ ಇಂಥ ಘಟನೆಗಳು ಸಾಮಾನ್ಯವಾಗಿವೆ. ಆದರೆ, ರಾಜ್ಯದ ಸಾಹಸ ಪ್ರವಾಸೋದ್ಯಮದಲ್ಲಿ ಇನ್ನೂ ಪ್ರಮಾಣೀಕೃತ ಕಾರ್ಯವಿಧಾನವನ್ನು (ಎಸ್‌ಒಪಿ) ಅಳವಡಿಸಿಕೊಂಡಿಲ್ಲ ಎಂದು 'ಸೋಷಿಯಲ್ ಡೆವಲಪ್‌ಮೆಂಟ್ ಫಾರ್ ಕಮ್ಯುನಿಟೀಸ್ ಫೌಂಡೇಶನ್' ಎಂಬ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ನೌಟಿಯಾಲ್ ಬೇಸರ ವ್ಯಕ್ತಪಡಿಸಿದರು.

ಘಟನೆಯಲ್ಲಿ ಮೃತಪಟ್ಟವರ ಪೈಕಿ ಒಬ್ಬರಿಗೆ 70 ವರ್ಷ ಮೀರಿದ್ದು, ಮೂವರು 60 ವರ್ಷ ದಾಟಿದವರಾಗಿದ್ದಾರೆ. ಚಾರಣ ಕೈಗೊಳ್ಳುವ ಮನ್ನ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆಯೇ? ಎತ್ತರ ಪ್ರದೇಶಗಳ ಚಾರಣ ಕೈಗೊಳ್ಳುವವರ ದೇಹದಾರ್ಢ್ಯ ಪರೀಕ್ಷಿಸುವುದೂ ಸೇರಿದಂತೆ ಇನ್ನಿತರ ಪ್ರಕ್ರಿಯೆಯನ್ನು ಸಾಹಸ ಪ್ರವಾಸೋದ್ಯಮ ವಲಯ ಅಳವಡಿಸಿಕೊಳ್ಳಬೇಕು. ಚಾರಣ ಕೈಗೊಳ್ಳುವವರು ಸಮಸ್ಯೆಗೆ ಸಿಲುಕಿದರೆ, ಸಹಾಯ ಪಡೆಯಲು ನೆರವು ಕಲ್ಪಿಸಲು ಅನುವು ಮಾಡಿಕೊಡುವಂತೆ ಸ್ಯಾಟಲೈಟ್ ಫೋನ್‌ಗಳನ್ನು ನೀಡಬೇಕು ಎಂದು ಪ್ರತಿಪಾದಿಸಿದರು.

          ಸಹಸ್ತ್ರ ಸರೋವರದ ಈ ದುರ್ಘಟನೆಯು 2022ರಲ್ಲಿ ದ್ರೌಪದಿ ಕಾ ದಂಡ ಶಿಖರದಲ್ಲಿ ನೆಹರೂ ಸಂಸ್ಥೆಯ 29 ಪರ್ವತಾರೋಹಿಗಳು ಮೃತಪಟ್ಟ ಘಟನೆಯನ್ನು ನೆನಪಿಸುತ್ತಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಹಿಮಪಾತ, ಹಿಮಗಾಳಿ, ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯದ ಆಯಾಮದಲ್ಲೂ ನಾವು ನೋಡಬೇಕಿದೆ ಎಂದರು.

              ಬೆಂಗಳೂರಿನ 22 ಸದಸ್ಯರಿದ್ದ ತಂಡವು ಮೇ 29ರಂದು ಉತ್ತರಕಾಶಿಯಿಂದ ಸಹಸ್ತ್ರ ಸರೋವರಕ್ಕೆ ಚಾರಣ ಕೈಗೊಂಡಿತ್ತು. ಈ ತಂಡವು ವಾಪಸ್ ಜೂನ್ 7ರಂದು ವಾಪಸ್ ಬರಬೇಕಿತ್ತು. ಆದರೆ, ವಿಪರೀತ ಹಿಮಪಾತ ಮತ್ತು ಹಿಮಗಾಳಿಯ ಕಾರಣದಿಂದಾಗಿ ಒಂಬತ್ತು ಮಂದಿ ಮೃತಪಟ್ಟಿದ್ದರು. 13 ಮಂದಿಯನ್ನು ರಕ್ಷಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries