HEALTH TIPS

ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

           ಇಂಡೋನೇಷ್ಯಾಕಾಣೆಯಾಗಿದ್ದ ಮಹಿಳೆಯೊಬ್ಬರು ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ‌ ನಡೆದಿದೆ.

           ದೈತ್ಯ ಹೆಬ್ಬಾವೊಂದು ಫರಿದಾ ಎನ್ನುವ 49 ವರ್ಷದ ಮಹಿಳೆಯನ್ನು ಜೀವಂತವಾಗಿ ನುಂಗಿ ಹಾಕಿದೆ. ಈ ಕುರಿತು ಎನ್.ಡಿ.ಟಿ.ವಿ ವೆಬ್ಸೈಟ್ ವರದಿ ಮಾಡಿದೆ.

ಈ ಘಟನೆ ಇಂಡೋನೇಷ್ಯಾದ ದಕ್ಷಿಣದ ಪ್ರಾಂತ್ಯವಾದ ಸುಲಾವೇಸಿ ಬಳಿಯ ಕಾಲಾಪಾಂಗ್ ಎಂಬಲ್ಲಿ ನಡೆದಿದೆ.

            ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಗ್ರಾಮದ ಅರಣ್ಯದಲ್ಲಿ 16 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಹೆಬ್ಬಾವು ಮುಂದೆ ಹೋಗದೇ ತೆವಳುವುದನ್ನು ಕಂಡು ಅರಣ್ಯ ಇಲಾಖೆಯವರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವಾದರೂ ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳು ಆಗಾಗ ಕೇಳಿ ಬರುತ್ತವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries